ಐಪಿಎಲ್ ೧೯ ನೇ ಏಡಿಷನ್‌ನ ಪ್ಲೇ ಪಂದ್ಯಗಳು ನಾಳೆಯಿಂದ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಆರ್‌ಸಿಬಿ ಹಾಗೂ ದ್ವಿತೀಯ ಸ್ಥಾನ ಪಡೆದ ಗುಜರಾತ್ ಟೈಟನ್ಸ್ ನಡುವೆ ನಡೆಯಲಿದೆ.
ಕ್ವಾಲಿಫಾಯರ್-೧ ರ ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ತಲುಪುವುದು. ಎರಡನೇ ಪ್ಲೇ ಆಪ್ ಪಂದ್ಯವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದ ತಂಡಗಳ ನಡುವೆ ಅಂದರೆ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ೨೭ ರಂದು ನಡೆಯಲಿದೆ. ಈ ಪಂದ್ಯಕ್ಕೆ ಎಲಿಮನೆಟರ್ ಪಂದ್ಯ ಎಂತಲೂ ಕರೆಯುತ್ತಾರೆ.
ಕ್ವಾಲಿಫಾಯರ್-೨ ೨೮ ರಂದು ಕ್ವಾಲಿಫಾಯರ್-೧ ರಲ್ಲಿ ಸೋತ ತಂಡವು ಹಾಗೂ ಎಲಿಮನೆಟರ್ ನಲ್ಲಿ ಗೆದ್ದ ತಂಡದ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಹಾಗೂ ಕ್ವಾಲಿಫಾಯರ್-೧ ರಲ್ಲಿ ಗೆದ್ದ ತಂಡದ ನಡುವೆ ೩೧ ರಂದು ಫೈನಲ್ ಪಂದ್ಯ ನಡೆಯಲಿದೆ.

