ಕೊಪ್ಪಳ: ಎಲ್ಲ ಧರ್ಮಕ್ಕಿಂತ ಮುಸ್ಲಿಂ ಧರ್ಮವೇ ಶ್ರೇಷ್ಠ ಎಂದು ಹೇಳಿ ಬಸವರಾಜ ರಾಯರಡ್ಡಿ (Basavaraja Rayareddy) ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ಇದೀಗ ಹಿಂದೂ ಧರ್ಮದ ಬಗ್ಗೆ ಮಾತನಾಡಿ ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಿನ್ನೆ ಮುಸ್ಲಿಂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಸವರಾಜ ರಾಯರಡ್ಡಿ, ಇಸ್ಲಾಂ (Islam) ಧರ್ಮ ಒಂದು ಶ್ರೇಷ್ಠ ಧರ್ಮ, ಇಸ್ಲಾಂ ಬಗ್ಗೆ ತಪ್ಪು ಕಲ್ಪನೆ ಮಾಡಲಾಗುತ್ತಿದೆ.
ನಾನು ಮಠಮಾನ್ಯಗಳಿಗೆ ಜಾಸ್ತಿ ಹೋಗೋದಿಲ್ಲ ಅಂತಾ ಹೇಳಿದ್ರು. ಸಚಿವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ರಾಯರೆಡ್ಡಿ ಅವರು ಇಂದು ಮುಂಜಾನೆಯಿಂದ ಟೆಂಪಲ್ ರನ್ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.


