ದುಬೈ: ಭಾರತ ಹಾಗೂ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡಗಳು ನಾಳೆ ಇಲ್ಲಿ ನಡೆಯುವ ಮಹಿಳಾ ಏಸಿಯಾ ಕಪ್ ಪ್ರಸಸ್ತಿಗಾಗಿ ಸೆಣಸಾಟಕ್ಕೆ ಇಳಿಯಲಿವೆ.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಾಳೆ ಭಾರತೀಯ ಕಾಲಮಾನ ರಾತ್ರಿ 8 ಕ್ಕೆ ಪಂದ್ಯ ಶುರುವಾಗಲಿದೆ.
ಭಾರತ ತಂಡವು ಬಾಂಗ್ಲಾದೇಶ ತಂಡವನ್ನು ಸೋಲಿಸಿ ಪೈನಲ್ ತಲುಪಿತ್ತು. ಶ್ರೀಲಂಕಾ ತಂಡವು ಪಾಕಿಸ್ತಾನ ತಂಡವನ್ನು ಪರಾಭವಗೊಳಿಸಿ ಭಾರತ ವಿರುದ್ಧದ ಅಂತಿಮ ಕಾಳಗಕ್ಕೆ ಸಜ್ಜಾಗಿದೆ.


