ಸ್ವೀಡನ್ ಫುಟ್‌ಬಾಲ್ ತಂಡವು ಫೀಪಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಟುನಿಸಿಯಾ ತಂಡವನ್ನು ೫-೧ ಗೋಲಿನ ಭರ್ಜರಿ ಅಂತರದಿAದ ಗೆಲ್ಲುವ ಮೂಲಕ ವಿಶ್ವಕಪ್‌ಗೆ ತನ್ನ ಪುನರಾಗಮನವನ್ನು ಅದ್ಧೂರಿಯಾಗಿ ಘೋಷಿಸಿಕೊಂಡಿದೆ.
ರವಿವಾರ ನಡೆದ ಪಂದ್ಯದಲ್ಲಿ ದೊಡ್ಡ ಅಂತರದಿAದ ಗೆದ್ದ ಸ್ವೀಡನ್ ತಂಡವು ಗುಂಪು ಎಫ್ ನಲ್ಲಿ ಅಗ್ರಸ್ಥಾನಕ್ಕೆ ಏರಿದೆ.
ಇದಕ್ಕೆ ಮುನ್ನ ನಡೆದ ಇನ್ನೊಂದು ಲೀಗ್ ಪಂದ್ಯದಲ್ಲಿ ಜಪಾನ್ ಹಾಗೂ ನೆದರಲೆಂಡ್ ತಂಡಗಳು ಪೂರ್ಣಾವಧಿ ಆಟ ಮುಗಿದಾಗ ೨-೨ ಗೋಲಿನಿಂದ ಸಮಸ್ಥಿತಿಯಲ್ಲಿದ್ದು, ಡ್ರಾ ಪಂದ್ಯದಲ್ಲಿ ಉಭಯ ತಂಡಗಳು ತಲಾ ೧ ಪಾಯಿಂಟ್ ಹಂಚಿಕೊAಡವು.


