ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಆಕರ್ಷಕ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಕಳೆದ ಬಾರಿಯ ಚಾಂಪಿಯನ್ ಅರ್ಜೆಂಟಿನಾ ತಂಡವು ಅಲ್ಜೆರಿಯಾ ವಿರುದ್ಧ ನಡೆದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ೩-೦ ಅಂತರದ ಸುಲಭ ಗೆಲುವು ದಾಖಲಿಸಿತು.
೩೮ ವರ್ಷದ ಅರ್ಜಿಂಟಿನಾದ ಆಟಗಾರ ಮೆಸ್ಸಿ ಈ ಹ್ಯಾಟ್ರಿಕ್‌ನಿಂದ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟರಲ್ಲದೇ ಜರ್ಮನಿಯ ಮಿರೂಸ್ಲಾವ್ ಕ್ಲೂಸೆ ಅವರ ವಿಶ್ವಕಪ್ ಹ್ಯಾಟ್ರಿಕ್ ದಾಖಲೆಯನ್ನು ಸಮಗಟ್ಟಿದರು.
ಲಿಯೋನೆಲ್ ಮೆಸ್ಸಿ ಅವರು ಪಂದ್ಯದ ಮೊದಲ ಅವಧಿಯಲ್ಲಿ ಮೊದಲ ಗೋಲು ಗಳಿಸಿದರು. ನಂತರ ದ್ವಿತೀಯಾರ್ಧ ಆರಂಭದಲ್ಲಿಯೇ ಎರಡನೇ ಹಾಗೂ ಪಂದ್ಯದ ೭೬ ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದರು.


