ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಇಂದು ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಕೊಲಂಬಿಯಾ ೩-೧ ಗೋಲಿನಿಂದ ಉಜಬೇಕಿಸ್ತಾನ್ ವಿರುದ್ಧ ಗೆಲುವು ಸಾಧಿಸಿತು.
ಕೊಲಂಬಿಯಾ ಪರವಾಗಿ ಪಂದ್ಯದ ೪೦ ನೇ ಡನಿಯಲ್ ಮುನೋಜ್ ಗೋಲು ಖಾತೆ ತೆರೆದರು. ಇದಾದ ನಂತರ ಉಜಬೇಕಿಸ್ತಾನ್ ಪರ ಪಂದ್ಯದ ೬೦ ನೇ ನಿಮಿಷದಲ್ಲಿ ಅಬೋಸೇಕ್ ಫಿಯಾಜೊಲೆವ್ ಗೋಲು ಬಾರಿಸಿದರು.
ಇದಾದ ನಂತರ ಲೂಯಿಸ್ ಡಿಯಾಜ್ ಮತ್ತೇ ಕೊಲಂಬಿಯಾ ಪರ ಗೋಲು ಗಳಿಸಿ ತಂಡಕ್ಕೆ ೨-೧ ಮುನ್ನಡೆ ತಂದುಕೊಟ್ಟರು. ತದನಂತರ ಜಾಮಿನ್ಟಾನ್ ಕೆಂಪೆಜ್ ೯೦ ನೇ ನಿಮಿಷದಲ್ಲಿ ಗೊಲು ಗಳಿಸಿ ತಂಡದ ಗೆಲುವನ್ನು ೩-೧ ಕ್ಕೆ ಹಿಗ್ಗಿಸಿದರು.


