ಬುಲಾವಾಯೋ(ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರನೇ ಟ್ವೆಂಟಿ-೨೦ ಪಂದ್ಯ ನಾಳೆ ನಡೆಯಲಿದೆ.
ಇಲ್ಲಿನ ಕ್ವೀನ್ಸ್ ಸ್ಟೋರ್ಟ್ಸ್ ಕ್ಲಬ್ ಮೈದಾನದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೪ ಗಂಟೆಗೆ ಆರಂಭವಾಗುವುದು. ಎರಡು ತಂಡಗಳು ತಲಾ ಒಂದು ಪಂದ್ಯ ಗೆದ್ದಿದ್ದು, ನಾಳೆಯ ಪಂದ್ಯ ಗೆದ್ದ ತಂಡ ಚುಟುಕು ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.


