Ad imageAd image
- Advertisement -  - Advertisement -  - Advertisement - 

ಮತ್ತೊಮ್ಮೆ ಮೋದಿ ಜೈಕಾರ ಅಭಿವೃದ್ಧಿಯೇ ಗೆಲುವಿಗೆ ಸಾಕಾರ : ಮಾನಪ್ಪ ಡಿ ವಜ್ಜಲ್

Bharath Vaibhav
ಮತ್ತೊಮ್ಮೆ ಮೋದಿ ಜೈಕಾರ ಅಭಿವೃದ್ಧಿಯೇ ಗೆಲುವಿಗೆ ಸಾಕಾರ : ಮಾನಪ್ಪ ಡಿ ವಜ್ಜಲ್
WhatsApp Group Join Now
Telegram Group Join Now

ಮುದಗಲ್ಲ : ಲಿಂಗಸಸೂರು ತಾಲೂಕಿನ ಶಾಸಕರಾದ ಮಾನಪ್ಪ ಡಿ ವಜ್ಜಲ್ ರವರು ರಾಯಚೂರು -ಯಾದಗಿರಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಛತ್ತರ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಗಲಾಪುರ ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು.

ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ವಿಶ್ವನಾಯಕ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿ ಶ್ರೀ ರಾಜಾ ಅಮರೇಶ್ವರ ನಾಯಕ ಅವರನ್ನು ಎಂದಿಗಿಂತಲೂ ಪ್ರಚಂಡ ಮತಗಳ ಅಂತರಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಿಂಗಸುಗೂರು ಮಂಡಲ ಅಧ್ಯಕ್ಷರಾದ ಶ್ರೀ ಅಯ್ಯಪ್ಪ ಮಾಳೂರು, ಮುದಗಲ್ ಮಂಡಲ ಅಧ್ಯಕ್ಷರಾದ ಹುಲ್ಲೇಶ್ ಸಾಹುಕಾರ ಸೇರಿದಂತೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವೀರನಗೌಡ ಬಿ ಪಾಟೀಲ್ ಲೆಕ್ಕಿಹಾಳ, ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!