ಬೆಂಗಳೂರು : ಭಾರತ ಹಾಗೂ ಪಾಕ್ ನಡುವೆ ಯುದ್ಧದ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಪಾಕಿಸ್ತಾನ ಬಾಂಬ್ ಹಾಕಬೇಕು ಎಂದು ಪ್ರಚೋದನಾಕಾರಿ ಹೇಳಿಕೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅನ್ಯಕೋಮಿ ಯುವಕನನ್ನು ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಭಾರತ ಹಾಗೂ ಪಾಕ್ ನಡುವೆ ಯುದ್ಧ ಆಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಪಾಕ್ ಯಾಕೆ ಬಾಂಬ್ ಹಾಕುತ್ತಿಲ್ಲ, ಜನರೆಲ್ಲ ನೆಮ್ಮದಿಯಿಂದ ಇರುವಾಗ ಈ ರೀತಿ ಸೃಷ್ಟಿಸಿದ್ದು, ಮೋದಿ, ಹೀಗಾಗಿ ಮೊದಲು ಪ್ರಧಾನಿಯ ಮನೆಗೆ ಬಾಂಬ್ ಹಾಕಿ ಎಂದು ಆರೋಪಿ ನವಾಜ್ ಎಂಬಾತ ಹೇಳಿಕೆ ನೀಡಿದ್ದ. ಪಬ್ಲಿಕ್ ಸರ್ವೆಂಟ್ ಐಡಿಯಲ್ಲಿ ಈ ವಿಡಿಯೋವನ್ನು ಹರಿಬಿಟ್ಟಿದ್ದ.
ಪೊಲೀಸರು ವಿಚಾರಣೆ ನಡೆಸುವ ವೇಳೆಯಲ್ಲಿ ಈತ ರಾಜ್ಯದಲಿ ಹಲವೆಡೆ ಪ್ಯಾಲೆಸ್ತೇನ್ ಹಾಗೂ ಪಾಕಿಸ್ತಾನದ ಪರ ಸೋಷಿಯಲ್ ಮೀಡಿಯಾದಲ್ಲಿ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ನವಾಜ್ ನನ್ನು ಬಂಧಿಸಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ.