ನವದೆಹಲಿ : ಪ್ರಧಾನಿ ಮೋದಿ ಅವರು ಮಾರಿಷಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಅಧ್ಯಕ್ಷ ಧರಮ್ ಗೋಖೂಲ್ ಅದ್ದೂರಿಯಾಗಿ ಸ್ವಾಗತಿಸಿದರು.
ಮಾರ್ಚ್ 12 ರಂದು ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತಡರಾತ್ರಿ ಮಾರಿಷಸ್‌ಗೆ ತಲುಪಿದ್ದು, ಮಾರಿಷಸ್‌ನ ಪೋರ್ಟ್ ಲೂಯಿಸ್‌ನಲ್ಲಿರುವ ಹೋಟೆಲ್‌ಗೆ ಆಗಮಿಸುತ್ತಿದ್ದಂತೆ ಭಾರತೀಯ ಅನಿವಾಸಿ ಸದಸ್ಯರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ.
ಇನ್ನು ಈ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರು 2 ದಿನಗಳ ಭೇಟಿಗೆ ಮಾರಿಷಸ್‌ಗೆ ತೆರಳಿದರು. ಅಲ್ಲಿನ ಪ್ರಧಾನಿ ಮತ್ತು ಗಣ್ಯರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿ ಭಾರತ-ಮಾರಿಷಸ್‌ನ ಶಾಶ್ವತ ಸಂಬಂಧಗಳನ್ನು ಬಲಪಡಿಸಲಿದೆ ಎಂದು ಬರೆದುಕೊಂಡಿದೆ.
ಇನ್ನು ಪ್ರಧಾನಿ ಮೋದಿ ಅವರು ಹಾಗೂ ಮಾರಿಷಸ್‌ನ ತಮ್ಮ ಪ್ರಧಾನಿ ನವೀನ್ ರಾಮ್ ಗೂಲಮ್ ಅವರೊಂದಿಗೆ ನಾಗರಿಕ ಸೇವಾ ಕಾಲೇಜು ಕಟ್ಟಡವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಜೊತೆಗೆ ಹಲವಾರು ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.