ನವದೆಹಲಿ : ಪಾಕಿಸ್ತಾನಕ್ಕೆ ಜೀವಂತವಾಗಿ ಸೆರೆಸಿಕ್ಕಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಬಿಡುಗಡೆಯಾಗಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತ ನಡೆಸುತ್ತಿದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಪೂರ್ಣಂ ಸಾಹು ಗಡಿ ದಾಟಿ ಹೋಗಿ ಪಾಕ್ ಯೋಧರ ಕೈಗೆ ಸೆರೆಸಿಕ್ಕಿದ್ದರು.
ಪೂರ್ಣ ಸಾಹು ಬಿಡುಗಡೆಗಾಗಿ ಭಾರತ ನಿರಂತರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿತ್ತು. ನಿನ್ನೆಯಷ್ಟೆ ಪೂರ್ಣಂ ಕುಮಾರ್ ಪತ್ನಿ ಸರ್ಕಾರದ ಬಳಿ ಪತಿಯ ಬಿಡುಗಡೆಗೆ ಮನವಿ ಮಾಡಿಕೊಂಡಿದ್ದರು.
ಪೂರ್ಣಂ ಬಂಧನದ ಬೆನ್ನಲ್ಲೇ ಭಾರತವೂ ಸಹ ಪಾಕಿಸ್ತಾನದ ಯೋಧನೊಬ್ಬನನ್ನು ಜೀವಂತವಾಗಿ ಸೆರೆಹಿಡಿದಿತ್ತು. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನವು ಈಗ ತನ್ನ ಯೋಧನ ಬಿಡುಗಡೆಗಾಗಿ ಭಾರತದ ಯೋಧನನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.
ಪಾಕಿಸ್ತಾನ – ಭಾರತ ನಡುವಿನ ಜೀನಿವಾ ಒಪ್ಪಂದಂತೆ ಪರಸ್ಪರ ದೇಶಗಳು ಯೋಧರು ಸೆರೆಸಿಕ್ಕರೆ ಚಿತ್ರಹಿಂಸೆ ನೀಡದೇ ವಾಪಸ್ ಮರಳಿಸಬೇಕಿದೆ.