ಬಾದಾಮಿ : ಬಾದಾಮಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಸಿದ್ದಪ್ಪ. ಲಕ್ಷ್ಮಪ್ಪ.ಚೆಲುವನ್ನವರ ಇಂದು ಬೆಳಗಿನ ಜಾವ ಬಾದಾಮಿಯಿಂದ ಕೆರೂರ ಮಾರ್ಗದ ಯಂಕಂಚಿ ಬಳಿ ಆಕಸ್ಮಿಕ ಬೈಕ್ ಮುಗುಚಿ ನಿಧನರಾಗಿದ್ದಾರೆ ಎಂದು ಬಾದಾಮಿ ಪೊಲೀಸ್ ವೃತ್ತ ನಿರೀಕ್ಷಕರಾದ ಕರಿಯಪ್ಪ ಬನ್ನಿ ತಿಳಿಸಿದ್ದಾರೆ.
ಮೃತ ಪೊಲೀಸ್ ಪೇದೆಯ ಅಂತ್ಯಕ್ರಿಯೆಯು ಅವರ ಗ್ರಾಮ ಬಾದಾಮಿ ತಾಲೂಕಿನ ಬಂದಕೇರಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
ಪೊಲೀಸ್ ಪೇದೆ ಸಿದ್ದಪ್ಪ. ಲಕ್ಷ್ಮಪ್ಪ. ಚಲುವನ್ನವರ ನಿಧನಕ್ಕೆ ಬಾದಾಮಿ ಪೋಲೀಸ್ ವೃತ್ತ ನಿರೀಕ್ಷಕರಾದ ಕರಿಯಪ್ಪ ಬನ್ನಿ (ಸಿ. ಪಿ. ಐ.) ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್( ಪಿ. ಎಸ್. ಐ.) ವಿಠಲ್ ನಾಯಿಕ್ ಹಾಗೂ ಸರ್ವ ಸಿಬ್ಬಂದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ವರದಿ: ರಾಜೇಶ್. ಎಸ್. ದೇಸಾಯಿ