ನವದೆಹಲಿ: ಪ್ರಪಂಚದಲ್ಲಿರುವ ನಿರಾಶ್ರಿತರಿಗೆಲ್ಲಾ ನಮ್ಮ ದೇಶದಲ್ಲಿ ಇರಲು ಅವಕಾಶ ಮಾಡಿಕೊಡಲು, ಆಶ್ರಯ ಕಲ್ಪಿಸಿಕೊಡಲು ಭಾರತ ಧರ್ಮ ಛತ್ರವಲ್ಲ ಎಂದು ವಿದೇಶಿ ಪ್ರಜೆಯೊಬ್ಬನ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಶ್ರೀಲಂಕಾ ಪ್ರಜೆಯೊಬ್ಬ ತನ್ನನ್ನು ಭಾರತದಿಂದ ಗಡಿಪಾರು ಮಾಡಿರುವ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಭಾರತ ನಿರಾಶ್ರಿತರ ಧರ್ಮ ಛತ್ರವಲ್ಲ ಎಂದಿದೆ.ಈ ಹಿಂದಿನ ಶ್ರೀಲಂಕಾದ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ ಟಿಟಿಇ) ಜತೆ ನಂಟು ಹೊಂದಿದ್ದ ಶಂಕೆಯ ಮೇಲೆ 2015ರಲ್ಲಿ ಶ್ರೀಲಂಕಾ ಪ್ರಜೆಯನ್ನು ಬಂಧಿಸಲಾಗಿತ್ತು ಮತ್ತು ಆ ನಂತರ ಗಡಿಯಾರು ಆದೇಶ ಮಾಡಲಾಗಿತ್ತು.
ಹೀಗಾಗಿ 2022ರಲ್ಲಿ ಮದ್ರಾಸ್ ಹೈಕೋರ್ಟ್ ಈತನಿಗೆ ಏಳು ವರ್ಷ ಜೈಲು ವಾಸ ಶಿಕ್ಷೆ ನೀಡಿ ಆ ಬಳಿಕ ಈತನನ್ನು ಭಾರತದಿಂದ ಗಡಿಪಾರು ಮಾಡುವಂತೆ ಆದೇಶ ನೀಡಿತ್ತು. ಆದ್ರೆ ಶ್ರೀಲಂಕಾದಲ್ಲಿ ತನ್ನ ಜೀವಕ್ಕೆ ಅಪಾಯವಿದೆ.ನನ್ನ ಪತ್ನಿ ಮತ್ತು ಮಕ್ಕಳು ಭಾರತದಲ್ಲಿಯೇ ನೆಲೆಸಿದ್ದಾರೆ.
ಹೀಗಾಗಿ ಭಾರತದಲ್ಲೇ ಆಶ್ರಯ ನೀಡಬೇಕು ಎಂದು ಶ್ರೀಲಂಕಾ ಪ್ರಜೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.ಈ ಶ್ರೀಲಂಕಾ ಪ್ರಜೆಯ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಜಸ್ಟೀಸ್ ದತ್ತಾ, ಪ್ರಪಂಚದಲ್ಲಿರುವ ಎಲ್ಲಾ ನಿರಾಶ್ರಿತರಿಗೆ ಭಾರತ ಆಶ್ರಯ ನೀಡಲು ಹೇಗೆ ಸಾಧ್ಯ..? ನಾವು ಈಗಾಗಲೇ 140 ಕೋಟಿ ಜನಸಂಖ್ಯೆಯಿಂದ ಬಳಲುತ್ತಿದ್ದೇವೆ. ಈ ಮಧ್ಯೆ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಲು ಭಾರತ ಧರ್ಮಶಾಲಾ ಅಲ್ಲ ಎಂದಿದ್ದಾರೆ.