ರಾಮನಗರ : ಡ್ಯಾಂ ನೋಡಲೆಂದು ತೆರಳಿದ್ದ ಏಳು ಯುವತಿಯ ತಂಡದಲ್ಲಿನ ಮೂವರು ಯುವತಿಯರು ಜಲಾಶಯದ ನೀರಲ್ಲಿ ಮುಳುಗಿ ದಾರುಣ ಸಾವನ್ನಪ್ಪಿರುವ ದುರಂತ ಜಿಲ್ಲೆಯ ಮಾಗಡಿ ತಾಲೂಕಿನ ವೈಜಿಗುಡ್ಡದಲ್ಲಿ ಇಂದು ನಡೆದಿದೆ.
ಮೃತ ಯುವತಿಯರನ್ನು ಬೆಂಗಳೂರು ಮೂಲದ ರಾಘವಿ (18), ಮಧುಮಿತ (20) ಹಾಗೂ ರಮ್ಯಾ (22 ) ಎಂದು ಗುರುತಿಸಲಾಗಿದೆ.
ವೈಜಿಗುಡ್ಡ ಜಲಾಶಯ ವೀಕ್ಷಣೆಗೆಂದು ತೆರಳಿದ್ದ ಯುವತಿಯರ ತಂಡದಲ್ಲಿ ಓರ್ವರು ಮೊದಲು ಆಯಾತಪ್ಪಿ ಡ್ಯಾಂ ನೀರಿಗೆ ಬಿದ್ದಿದ್ದಾರೆ.
ಕೂಡಲೇ ಯುವತಿಯರು ರಕ್ಷಣೆ ಮುಂದಾದ ಒಟ್ಟು ಮೂವರು ನೀರಲ್ಲಿ ಮುಳುಗಿದ್ದಾರೆ. ಇನ್ನು ನಾಲ್ವರನ್ನು ಯುವಕನೋರ್ವ ರಕ್ಷಣೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.