ಹುಮನಾಬಾದ: ಸಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 893ನೇ ಜಯಂತೋತ್ಸವ ನಿಮಿತ್ತ ಸಮಾನತೆಗಾಗಿ ಪಟ್ಟಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಾಳೆ ಸೋಮುವಾರ ಬೆಳಗ್ಗೆ 9:30ಕ್ಕೆ ಕಾರ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.ಪಟ್ಟಣದ ಟೀಚರ್ ಕಾಲೋನಿಯಿಂದ ರ್‍ಯಾಲಿ ಆರಂಭಗೊಂಡು ಕಲ್ಲೂರ ರೋಡ ಹನುಮಾನ ಮಂದಿರ,ಡಾ.ಅಂಬೇಡ್ಕರ್ ವೃತ್ತ,ಸರದಾರ ವಲ್ಲಭಾಯಿ ಪಟೇಲ ವೃತ್ತ,ಬಾಲಾಜಿ ಮಂದಿರ,ಬಸವೇಶ್ವರ ವೃತ್ತ,ಸುಭಾಷ್ ಚಂದ್ರಭೋಸ್ ವೃತ್ತ,ಶಿವಾಜಿ ವೃತ್ತದ ಮೂಲಕ ಪುನಃ ಡಾ.ಬಿ.ಆರ್ ಅಂಬೇಡ್ಕರ್ ವೃತದವರೆಗೆ ಕಾರ್ ರ್‍ಯಾಲಿ ಜರುಗಿ,ಥೇರ್ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.ಹೀಗಾಗಿ ಹೆಚ್ಚಿನ ಜನರು ಭಾಗಿಯಾಗಿ ರ್‍ಯಾಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಕಾರ್ಯದರ್ಶಿ ನವೀನ ಬತಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಸಜೀಶ್ ಲಂಬುನೋರ್




