LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಸಾಲ ಮನ್ನಾ, ವಿಮೆ ಹಣದ ಆಸೆಗೆ ಗಂಡನನ್ನೇ ಕೊಂದ ಹೆಂಡತಿ 

Advertisement

ಗಂಗಾವತಿ: ಸಾಲದ ಹೊರೆ ತೀರಿಸಲು ಹಾಗೂ ವಿಮೆ ಹಣ ಪಡೆಯುವ ಉದ್ದೇಶದಿಂದ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ನಡೆದಿರುವ ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಪತಿ ಮೃತಪಟ್ಟರೆ ಸಾಲ ಮನ್ನಾ ಆಗಬಹುದು ಮತ್ತು ವಿಮೆ ಹಣ ಕೈ ಸೇರಬಹುದು ಎಂಬ ಉದ್ದೇಶದಿಂದ ಪತ್ನಿ ಈ ಕೃತ್ಯ ಎಸಗಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಪತ್ನಿ ಸೇರಿದಂತೆ ಸಂಬಂಧಪಟ್ಟವರ ವಿಚಾರಣೆ ನಡೆಸಲಾಗಿದ್ದು, ಕೊಲೆಯ ಹಿಂದಿನ ನಿಜವಾದ ಕಾರಣ ಹಾಗೂ ಇತರ ವಿವರಗಳು ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮುಷ್ಟೂರು ಕ್ಯಾಂಪ್ ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಘವೇಂದ್ರ(45) ಕೊಲೆಯಾದ ವ್ಯಕ್ತಿ. ಪತ್ನಿ ಉಮಾ, ಸಂಬಂಧಿ ಶಿವಾಜಿ ಮತ್ತು ಕಲೀಲ್ ಸಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಘವೇಂದ್ರ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈತನನ್ನು ಕೊಲೆ ಮಾಡಿದರೆ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಪಡೆದ ಸಾಲ ಮನ್ನಾ ಆಗುತ್ತದೆ. ವಿಮೆಯಿಂದ ಹಣ ಬರುತ್ತದೆ ಎನ್ನುವ ಕಾರಣಕ್ಕೆ ಉಮಾ ಕೊಲೆಗೆ ಸಂಚು ರೂಪಿಸಿದ್ದಾಳೆ. 

ಸೆಪ್ಟೆಂಬರ್ 7ರಂದು ಗಂಗಾವತಿಗೆ ಆಗಮಿಸಿದ್ದ ಉಮಾ ವಿಮೆಯ ಹಣ ಮತ್ತು ಸಾಲ ಮನ್ನಾ ಆಗುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾಳೆ. ಅದೇ ದಿನ ರಾತ್ರಿ ಮುಸ್ಟೂರು ಕ್ಯಾಂಪ್ ನಿಂದ ಹೆಬ್ಬಾಳಕ್ಕೆ ಹೋಗುವ ಮಾರ್ಗದಲ್ಲಿ ಕಟ್ಟಿಗೆಯಿಂದ ಹೊಡೆದು ರಾಘವೇಂದ್ರನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್ ಗೆ 224 ರನ್ ಟಾರ್ಗೆಟ್ ನೀಡಿದ ಭಾರತ ತಂಡ ನೈಟ್ ಡ್ಯೂಟಿ ಮಾಡುತ್ತಿದ್ದ ಗಂಡನಿಗೆ ಊಟ ತಂದ ಪತ್ನಿ : ವೈರಲ್‌ ಆಯ್ತು ದೃಶ್ಯ ಬೋಟ್ ಮಗುಚಿ ಘೋರ ದುರಂತ :ಬರೋಬ್ಬರಿ 109 ವಲಸಿಗರು ದುರ್ಮರಣ ಕರ್ನಾಟಕ ತಂಡದ ಮಾನ ಉಳಿಸಿದ ನಾಯಕ ಸಮರನ್ ರವಿಚಂದ್ರನ್ ಕಬ್ಬು ಬೆಳೆಗಾರರ ಹೋರಾಟ : ಸ್ವಂತ ಹಣದಲ್ಲೇ 34 ರೈತರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ ಶಾಸಕ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ದೆಹಲಿಗೆ ಹಾರಲಿದ್ದಾರೆ ಡಿ.ಕೆ ಶಿವಕುಮಾರ್ ಬಾಂಗ್ಲಾದೇಶ ತಂಡಕ್ಕೆ 230 ರನ್ ಗಳ ಲೀಡ್ ಇಂದು ಆಟದ ಗೇರ್ ಬದಲಿಸಬೇಕಿದೆ ಭಾರತ ತಂಡ ದುರ್ಗಾ ಮಾತೆ ಕೊಂಡೊಯ್ಯುತ್ತಿದ್ದ ವೇಳೆಯೇ ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ : ಮೂವರು ಸಾವು, 7 ಜನ ಗಂಭೀರ ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ : ಗವಿ ಸಿದ್ದೇಶ್ವರ ಶ್ರೀ ಹೇಳಿಕೆ