LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೆಚ್ಚಿ ಬೀಳಿಸುವ ಕೃತ್ಯ : ಯುವಕನ ಕಿಡ್ನಾಪ್ ಮಾಡಿ ಗುಪ್ತಾಂಗ ಕತ್ತರಿಸಿದ ಮಂಗಳಮುಖಿಯರು

Advertisement

ಚಿತ್ರದುರ್ಗ : ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಆಘಾತಕಾರಿ (Shocking) ಘಟನೆಯೊಂದು ನಡೆದಿದ್ದು,. ಹೂ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮುಗ್ಧ ಯುವಕನೊಬ್ಬನನ್ನು ಅಪಹರಿಸಿ, ಆತನಿಗೆ ಅಮಲು ಪದಾರ್ಥ ನೀಡಿ ಲಿಂಗ ಬದಲಾವಣೆ ಮಾಡಿರುವ ಭೀಕರ ಕೃತ್ಯ ಬೆಚ್ಚಿಬೀಳಿಸಿದೆ.

ಹೂವು ಮಾರಾಟ ಮಾಡಲು ತೆರಳುತ್ತಿದ್ದ ಯುವಕನಿಗೆ ಕೆಲ ದಿನಗಳ ಹಿಂದೆ ಮಂಗಳಮುಖಿಯರ ಪರಿಚಯವಾಗಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡ ಅವರು, ಸೆಪ್ಟೆಂಬರ್ 1 ರಂದು ಸಂಚು ರೂಪಿಸಿ ಓಮ್ನಿ ಕಾರಿನಲ್ಲಿ ಯುವಕನನ್ನು ಅಪಹರಿಸಿದ್ದಾರೆ. ಚಳ್ಳಕೆರೆಯಿಂದ ಆತನನ್ನು ದಾವಣಗೆರೆಗೆ ಕರೆದೊಯ್ದು ಕೂಡಿಹಾಕಿದ್ದಾರೆ.

ದಾವಣಗೆರೆಯಲ್ಲಿ ಯುವಕನಿಗೆ ಪ್ರಜ್ಞೆ ತಪ್ಪುವಂತೆ ಅಮಲು ಪದಾರ್ಥ ನೀಡಲಾಗಿದ್ದು, ಆತನ ಸಮ್ಮತಿಯಿಲ್ಲದೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಗುಪ್ತಾಂಗವನ್ನು ಕತ್ತರಿಸಿದ್ದಾರೆ.

ಅಷ್ಟಕ್ಕೇ ನಿಲ್ಲದ ದುಷ್ಕರ್ಮಿಗಳು ಯುವಕನ ಮೈಮೇಲೆ ಬಿಸಿನೀರು ಸುರಿದು, ಬರೆ ಎಳೆದು ಅತಿಯಾದ ಚಿತ್ರಹಿಂಸೆ ನೀಡಿದ್ದಾರೆ. ಈ ನರಕಯಾತನೆಯಿಂದ ಹೇಗೋ ತಪ್ಪಿಸಿಕೊಂಡು ಬಂದ ಯುವಕ ಜೀವ ಉಳಿಸಿಕೊಂಡು ಮನೆಗೆ ಮರಳಿದ್ದನು. ಆದರೆ ಮರ್ಯಾದೆಗೆ ಅಂಜಿ ಕುಟುಂಬಸ್ಥರು ಘಟನೆಯನ್ನು ಯಾರಿಗೂ ತಿಳಿಸದೆ ಮುಚ್ಚಿಟ್ಟಿದ್ದರು.

ಗುರುವಾರ ಯುವಕನ ಮನೆಗೆ ನುಗ್ಗಿದ ಮಂಗಳಮುಖಿಯರ ತಂಡ, ಶಸ್ತ್ರಚಿಕಿತ್ಸೆಗೆ 3 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಆ ಹಣವನ್ನು ತಕ್ಷಣವೇ ಭರಿಸಬೇಕೆಂದು ಬೆದರಿಕೆ ಹಾಕಿದೆ.

ಹಣ ನೀಡದಿದ್ದರೆ ಸುಮ್ಮನಿರುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಂಧಲೆ ಎಬ್ಬಿಸಿದ್ದಾರೆ. ಮಂಗಳಮುಖಿಯರ ಈ ದುಂಡಾವರ್ತನೆಯಿಂದ ರೊಚ್ಚಿಗೆದ್ದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್ ಗೆ 224 ರನ್ ಟಾರ್ಗೆಟ್ ನೀಡಿದ ಭಾರತ ತಂಡ ನೈಟ್ ಡ್ಯೂಟಿ ಮಾಡುತ್ತಿದ್ದ ಗಂಡನಿಗೆ ಊಟ ತಂದ ಪತ್ನಿ : ವೈರಲ್‌ ಆಯ್ತು ದೃಶ್ಯ ಬೋಟ್ ಮಗುಚಿ ಘೋರ ದುರಂತ :ಬರೋಬ್ಬರಿ 109 ವಲಸಿಗರು ದುರ್ಮರಣ ಕರ್ನಾಟಕ ತಂಡದ ಮಾನ ಉಳಿಸಿದ ನಾಯಕ ಸಮರನ್ ರವಿಚಂದ್ರನ್ ಕಬ್ಬು ಬೆಳೆಗಾರರ ಹೋರಾಟ : ಸ್ವಂತ ಹಣದಲ್ಲೇ 34 ರೈತರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ ಶಾಸಕ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ದೆಹಲಿಗೆ ಹಾರಲಿದ್ದಾರೆ ಡಿ.ಕೆ ಶಿವಕುಮಾರ್ ಬಾಂಗ್ಲಾದೇಶ ತಂಡಕ್ಕೆ 230 ರನ್ ಗಳ ಲೀಡ್ ಇಂದು ಆಟದ ಗೇರ್ ಬದಲಿಸಬೇಕಿದೆ ಭಾರತ ತಂಡ ದುರ್ಗಾ ಮಾತೆ ಕೊಂಡೊಯ್ಯುತ್ತಿದ್ದ ವೇಳೆಯೇ ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ : ಮೂವರು ಸಾವು, 7 ಜನ ಗಂಭೀರ ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ : ಗವಿ ಸಿದ್ದೇಶ್ವರ ಶ್ರೀ ಹೇಳಿಕೆ