LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೆಳಗಾವಿ 2,165 ಕೋಟಿ ವಂಚನೆ ಕೇಸ್: ನೀಲಣ್ಣನವರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ 

Advertisement

ಬೆಂಗಳೂರು: ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಾವಿರಾರು ಮುಗ್ಧ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಜೈಲು ಸೇರಿರುವ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ಮಾಲೀಕ ಶಿವಾನಂದ್ ನೀಲಣ್ಣನವರ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಭಾರಿ ಗಾತ್ರದ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ.

ಸುಮಾರು 35 ಸಾವಿರ ಜನರಿಗೆ ಬರೋಬ್ಬರಿ ₹2,165 ಕೋಟಿ ವಂಚಿಸಿರುವ ಆಘಾತಕಾರಿ ಅಂಶವನ್ನು ತನಿಖಾ ಸಂಸ್ಥೆ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.

ಎರಡು ತಿಂಗಳ ಹಿಂದೆ ಬಂಧನ, ₹2.02 ಕೋಟಿ ಜಪ್ತಿ

ಶಿವಂ ಅಸೋಸಿಯೇಟ್ಸ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ತಿಂಗಳ ಹಿಂದಷ್ಟೇ ಇಡಿ ಅಧಿಕಾರಿಗಳು ಶಿವಾನಂದ್ ನೀಲಣ್ಣನವರ್‌ನನ್ನು ಬಂಧಿಸಿದ್ದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತೀವ್ರ ತನಿಖೆ ನಡೆಸಿ, ನೂರಾರು ಕಡತಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯಕ್ಕೆ ಅಧಿಕೃತವಾಗಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಈವರೆಗೆ ಆರೋಪಿಯ ಬ್ಯಾಂಕ್ ಖಾತೆಗಳಲ್ಲಿದ್ದ ₹2.02 ಕೋಟಿ ಹಣವನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಸಹಕಾರಿ ಸಂಘಗಳ ದುರ್ಬಳಕೆ, ₹185 ಕೋಟಿ ನಷ್ಟ

ತನಿಖಾ ವರದಿಯ ಪ್ರಕಾರ, ಈ ವಂಚನೆಯಿಂದ ₹185.95 ಕೋಟಿ ನಷ್ಟ ಉಂಟಾಗಿದೆ. ಸಾರ್ವಜನಿಕರ ಹೂಡಿಕೆಯ ಪೈಕಿ ₹25 ಕೋಟಿ ಹಣವನ್ನು ಶ್ರೀಮಾತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್' ಹಾಗೂ ಧನಶ್ರೀ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್' ಸಂಸ್ಥೆಗಳಲ್ಲಿ ಠೇವಣಿ ಇಡಲಾಗಿತ್ತು. ಆ ಠೇವಣಿಗಳನ್ನೇ ಅಡವಿಟ್ಟು, ಆಪ್ತರ ಹೆಸರಿನಲ್ಲಿ ಸಾಲ ಪಡೆದು ಅಪಾರ ಪ್ರಮಾಣದ ರಿಯಲ್ ಎಸ್ಟೇಟ್ ಭೂಮಿಯನ್ನು ಖರೀದಿಸಿ ಅಕ್ರಮ ಎಸಗಿರುವುದು ಬಯಲಾಗಿದೆ.

ಹೆಂಡತಿ, ಮಗನ ಖಾತೆಗೆ ಹಣ; ಸಿನಿಮಾಗೂ ಬಂಡವಾಳ!

ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿ ಹಣವನ್ನು ಶಿವಾನಂದ್ ತನ್ನ ಪತ್ನಿ ಸಂಗೀತಾ ಹಾಗೂ ಅಪ್ರಾಪ್ತ ಮಗ ಸಿದ್ಧಾಂತ್ ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿದ್ದಾನೆ.

ಅಷ್ಟೇ ಅಲ್ಲದೆ, ತನ್ನ ಒಡೆತನದ ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್' ಸಂಸ್ಥೆಗೆ ₹19 ಕೋಟಿ ಹಾಗೂ ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್' ಮತ್ತು `ಶಿವಂ ಫುಡ್ಸ್' ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಹರಿಸಿದ್ದಾನೆ.

ಜನರನ್ನು ವಂಚಿಸಿ ಸಂಗ್ರಹಿಸಿದ ಹಣದಲ್ಲಿ ₹5 ಕೋಟಿಯನ್ನು ಚಲನಚಿತ್ರ ನಿರ್ಮಾಣಕ್ಕೂ ಹೂಡಿಕೆ ಮಾಡಿ ದುಂದುವೆಚ್ಚ ಮಾಡಿರುವುದು ಇಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಬಹಿರಂಗವಾಗಿದೆ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್ ಗೆ 224 ರನ್ ಟಾರ್ಗೆಟ್ ನೀಡಿದ ಭಾರತ ತಂಡ ನೈಟ್ ಡ್ಯೂಟಿ ಮಾಡುತ್ತಿದ್ದ ಗಂಡನಿಗೆ ಊಟ ತಂದ ಪತ್ನಿ : ವೈರಲ್‌ ಆಯ್ತು ದೃಶ್ಯ ಬೋಟ್ ಮಗುಚಿ ಘೋರ ದುರಂತ :ಬರೋಬ್ಬರಿ 109 ವಲಸಿಗರು ದುರ್ಮರಣ ಕರ್ನಾಟಕ ತಂಡದ ಮಾನ ಉಳಿಸಿದ ನಾಯಕ ಸಮರನ್ ರವಿಚಂದ್ರನ್ ಕಬ್ಬು ಬೆಳೆಗಾರರ ಹೋರಾಟ : ಸ್ವಂತ ಹಣದಲ್ಲೇ 34 ರೈತರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ ಶಾಸಕ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ದೆಹಲಿಗೆ ಹಾರಲಿದ್ದಾರೆ ಡಿ.ಕೆ ಶಿವಕುಮಾರ್ ಬಾಂಗ್ಲಾದೇಶ ತಂಡಕ್ಕೆ 230 ರನ್ ಗಳ ಲೀಡ್ ಇಂದು ಆಟದ ಗೇರ್ ಬದಲಿಸಬೇಕಿದೆ ಭಾರತ ತಂಡ ದುರ್ಗಾ ಮಾತೆ ಕೊಂಡೊಯ್ಯುತ್ತಿದ್ದ ವೇಳೆಯೇ ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ : ಮೂವರು ಸಾವು, 7 ಜನ ಗಂಭೀರ ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ : ಗವಿ ಸಿದ್ದೇಶ್ವರ ಶ್ರೀ ಹೇಳಿಕೆ