LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಮದುವೆಗೆ ಮೊದಲೇ ಗರ್ಭಿಣಿಯಾದ ಭಾವಿ ಪತ್ನಿ: ವರನ ವಿರುದ್ಧ ಪೋಕ್ಸೋ ಕೇಸ್ 

Advertisement

ದಾವಣಗೆರೆ: ಭಾವಿ ಪತ್ನಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.

ತಾಲೂಕಿನ ಹಳ್ಳಿಯೊಂದರಲ್ಲಿ ಎರಡು ಕುಟುಂಬಗಳ ಹಿರಿಯರು ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ ಮಕ್ಕಳ ಮದುವೆ ಮಾಡಲು ನಿರ್ಧರಿಸಿದ್ದರು.

ಈ ಹಿನ್ನೆಲೆಯಲ್ಲಿ ಹುಡುಗ ಮತ್ತು ಹುಡುಗಿಯ ನಡುವೆ ಪರಿಚಯ ಬೆಳೆದಿತ್ತು. ಮದುವೆ ನಿಶ್ಚಯವಾಗಿದ್ದ ಕಾರಣ ಇಬ್ಬರೂ ಪರಸ್ಪರ ಆತ್ಮೀಯವಾಗಿದ್ದರು ಎನ್ನಲಾಗಿದೆ.

ಆದರೆ, ಹುಡುಗಿ ಅಪ್ರಾಪ್ತೆಯಾಗಿದ್ದ ಹಿನ್ನೆಲೆಯಲ್ಲಿ ಮದುವೆ ವಿಚಾರದಲ್ಲಿ ಕಾನೂನು ಸಂಬಂಧಿತ ಸಮಸ್ಯೆ ಎದುರಾಗಿದೆ. ಬಾಲಕಿ ಪ್ರಾಪ್ತವಯಸ್ಕಳಾಗಲು ಇನ್ನೂ ಸುಮಾರು 15 ತಿಂಗಳು ಬಾಕಿ ಇತ್ತು. ಈ ನಡುವೆ ಯುವಕ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬಳಿಕ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿರುವುದನ್ನು ತಿಳಿಸಿದಾಗ ಕುಟುಂಬದವರಿಗೆ ವಿಷಯ ಗೊತ್ತಾಗಿದೆ ಎನ್ನಲಾಗಿದೆ. ಮಗಳ ಸ್ಥಿತಿಯ ಬಗ್ಗೆ ತಿಳಿದ ಕುಟುಂಬದವರು ಆಕೆಯೊಂದಿಗೆ ಮಾತನಾಡಿದಾಗ, ಯುವಕನ ವಿರುದ್ಧ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್ ಗೆ 224 ರನ್ ಟಾರ್ಗೆಟ್ ನೀಡಿದ ಭಾರತ ತಂಡ ನೈಟ್ ಡ್ಯೂಟಿ ಮಾಡುತ್ತಿದ್ದ ಗಂಡನಿಗೆ ಊಟ ತಂದ ಪತ್ನಿ : ವೈರಲ್‌ ಆಯ್ತು ದೃಶ್ಯ ಬೋಟ್ ಮಗುಚಿ ಘೋರ ದುರಂತ :ಬರೋಬ್ಬರಿ 109 ವಲಸಿಗರು ದುರ್ಮರಣ ಕರ್ನಾಟಕ ತಂಡದ ಮಾನ ಉಳಿಸಿದ ನಾಯಕ ಸಮರನ್ ರವಿಚಂದ್ರನ್ ಕಬ್ಬು ಬೆಳೆಗಾರರ ಹೋರಾಟ : ಸ್ವಂತ ಹಣದಲ್ಲೇ 34 ರೈತರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ ಶಾಸಕ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ನಾಳೆ ಪ್ರತಿಭಟನೆ : ದೆಹಲಿಗೆ ಹಾರಲಿದ್ದಾರೆ ಡಿ.ಕೆ ಶಿವಕುಮಾರ್ ಬಾಂಗ್ಲಾದೇಶ ತಂಡಕ್ಕೆ 230 ರನ್ ಗಳ ಲೀಡ್ ಇಂದು ಆಟದ ಗೇರ್ ಬದಲಿಸಬೇಕಿದೆ ಭಾರತ ತಂಡ ದುರ್ಗಾ ಮಾತೆ ಕೊಂಡೊಯ್ಯುತ್ತಿದ್ದ ವೇಳೆಯೇ ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ : ಮೂವರು ಸಾವು, 7 ಜನ ಗಂಭೀರ ಇನ್ನೊಬ್ಬರನ್ನು ತುಳಿದು ಬದುಕುವುದು ಧರ್ಮವಲ್ಲ : ಗವಿ ಸಿದ್ದೇಶ್ವರ ಶ್ರೀ ಹೇಳಿಕೆ