Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರ. 

Advertisement

ಬೆಳಗಾವಿ : ಜಿಲ್ಲೆಯಲ್ಲಿ ಇಂದು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಮತ್ತು ಶ್ರೀ ಸಾಯಿ ಹಾಸ್ಪಿಟಲ್ ವಡಗಾವ್ ಬೆಳಗಾವಿ ಸಂಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಸಲಾಯಿತು.

 ಈ ಒಂದು ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಆರೋಗ್ಯ ಸಲಹೆಗಳು ಮತ್ತು ಹೆಣ್ಣು ಮಕ್ಕಳಿಗೆ ಸಂಪ್ರದಾಯ ಪ್ರಕಾರ ಅರಿಶಿನ ಕುಂಕುಮ ಕಾರ್ಯಕ್ರಮ ನೆರವೇರಿಸಿ ಮತ್ತು ಐದ್ ನೂರು ಜನ ಹೆಣ್ಣು ಮಕ್ಕಳಿಗೆ ಬ್ಯಾಗ್ ನೀಡುವ ಮೂಲಕ ಕಾರ್ಯಕ್ರಮ ನೆರವೇರಿಸಲಾಯಿತು. ಮತ್ತು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಲ್ಲಿ ಇರವು ನಿರ್ಗತಕರಿಗೆ ಆಹಾರ ಕಿಟ್ ವಿತರಣೆಯನ್ನು ಶ್ರೀ ಜಿವೇಶ್ವರ ಭವನ ವಡಗಾಂವದಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂಘದಿಂದ ಜನಗಳಿಗೆ ಸಿಗುವ ಯೋಜನೆಗಳು 
(KPKAS) ಶೆಕ್ತಿ ದಳ ಮತ್ತು 

1 ನಿವೇಶನ ಯೋಜನೆ ಬಡ್ಡಿರಹಿತ ಸುಲಭ ಕಂತುಗಳ ಲಭ್ಯ 
2 ಉಳಿತಾಯ ಯೋಜನೆ
3 ಬೌನ್ಸರ್ ಸೌಲಭ್ಯಗಳು 
4 ಮಾನವ ಶಕ್ತಿ ಪೂರೈಕೆ ಯೋಜನೆಗಳು 
5 ಸೇವೆ ಮತ್ತು ಕಾನೂನು ಸಲಹೆಗಳು ಮತ್ತು ಇನ್ನು ಹಲವಾರು ಈ ಸಂಸ್ಥೆ ವತಿಯಿಂದ ಯೋಜನೆಗಳನ್ನು ಪಡೆಯಬಹುದು.

news_1778043799_0_292.webp

 

 ಬೆಳಗಾವಿ ಜಿಲ್ಲೆಯ ಅಲ್ಪ ಸಂಖ್ಯಾತರ ಇಲಾಖೆಯ ಅಧಿಕಾರಿಯಾದ ಪೂಜಾರ್ ಅವರು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ  ಅವರು ಒಳ್ಳೆ ಒಳ್ಳೆ ಯೋಜನೆಗಳನ್ನು ಫ್ರೀಯಾಗಿ ನೀಡುತ್ತಿದ್ದಾರೆ ಅವುಗಳು ತಾವು  ಸದುಪಯೋಗ ಪಡೆದುಕೊಳ್ಳಬೇಕು  ಮತ್ತು ನಮ್ಮ ಇಲಾಖೆಯಿಂದ ಬರ್ತಕಂತ ಯೋಜನೆಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ತಾವು ಖುದ್ದಾಗಿ ಆಫೀಸಿಗೆ ಬಂದು ಬರುವಂತ ಸರ್ಕಾರದ ಯೋಜನೆಗಳು ಬಂದು ಪಡೆದುಕೊಳ್ಳಬೇಕು ಎಂದು ಮಾತನಾಡಿದರು. ಶ್ರೀ ಸಾಯಿ ಹಾಸ್ಪಿಟಲ್ ವೈದ್ಯರಾದ ಡಾ / ಎಸ್ ಎಮ್ ದೊಡಮನಿ ಅವರು ಬಿ ಎಚ್ ಜಮಾದಾರ್ ಅವರ ಸಂಸ್ಥೆಯಿಂದ ಜನಗಳಿಗೆ ಕೆಲಸ ಕಾರ್ಯಗಳ ಮಾಡುವುದು ನಾನು ಬಹಳ ಕೇಳಪಟ್ಟಿದ್ದೆ. ಜಮಾದಾರ್ ಸರ್ ನನಗೆ ಕಾಲ್ ಮಾಡಿ ನಮ್ಮ ನಿಮ್ಮ ಸಂಸ್ಥೆಗಳ ನಡುವೆ ಒಮ್ಮೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸೋಣ ಎಂದು ಕೇಳಿದಾಗ ನಾನು ನಿಮ್ಮ ಸಂಸ್ಥೆಯ ಮುಖಾಂತರ ನಂದು ಒಂದು ಸಣ್ಣ ಸೇವೆ ಆಗಲಿ ಎಂದು ಒಪ್ಪಿಕೊಂಡು ಅವರ ಸಯೋಗದೊಂದಿಗೆ  ನಡೆಸಿಕೊಡುತ್ತಿದ್ದೇವೆ ಎಂದು ಮಾತನಾಡಿದರು , 

ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್ಐ  ರುಕ್ಮಿಣಿ ಮೇಡಮ್ ಅವರು ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ದಿ ಸಂಸ್ಥೆಯವರು ನಿರುದ್ಯೋಗಿ ಜನಗಳಿಗೆ ತಮ್ಮ ಸಂಸ್ಥೆಯಿಂದ ಶಕ್ತಿದಳ ಅಂತ ಕೆಲಸ ಕಾರ್ಯಗಳ ನಡೆಸುತ್ತಿದೆ ಕಾಲಿ ಕುಳಿತುಕೊಂಡ ವಿದ್ಯಾರ್ಥಿಗಳಿಗೆ ಒಂದು ಒಳ್ಳೆ ಯೋಜನೆ ಮುಖಾಂತರ ಕೆಲಸ ನೀಡುತ್ತಿದ್ದಾರೆ ಅದರ ಉಪಯೋಗ ಪಡೆದುಕೊಳ್ಳಿ ಎಂದು ಮಾತನಾಡಿ. ಮತ್ತು ಹೆಣ್ಣುಮಕ್ಕಳ ಸೌರಕ್ಷಣೆ ಗೋಸ್ಕರ ಅಕ್ಕಪಡೆ ಅಂತ ಸರ್ಕಾರದಿಂದ ಜಾರಿಗೆ ಬಂದಿದೆ ಪ್ರತಿಯೊಬ್ಬ ಹೆಣ್ಣು ಮಕ್ಕಳು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸರ್ಕಾರದಿಂದ ಬರತಕ್ಕಂತಹ ಯೋಜನೆ ಎಲ್ಲರೂ ಇದನ್ನು ಸದಪಯೋಗ ಪಡೆದುಕೊಳ್ಳಿ ಅಂತಾ ಮಾತನಾಡಿದರು,

 ಕೊನೆಯದಾಗಿ ಮಾತನಾಡಿದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ/ ಬಿ ಎಚ್ ಜಮಾದಾರ ಅವರು ಪ್ರತಿಯೊಬ್ಬ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಹಿರಿಯರು ಕಿರಿಯರು ಅನ್ನದೆ ಇವತ್ತು ಎಲ್ಲರಿಗೂ ಆರೋಗ್ಯ ಉಚಿತ ಶಿಬಿರ ಇದೆ ಎಲ್ಲರೂ ಚೆಕಪ್ ಮಾಡಿಸಿಕೊಳ್ಳಿ ಮತ್ತು ಇವತ್ತು ವಿದ್ಯಾರ್ಥಿಗಳು ಶಾಲೆಯಲ್ಲಿ ಓದು ಬರಹ ಮುಗಿಸಿ ಕಾಲಿ ಅಡ್ಡಾಡುವುದು ನಮ್ಮ ಸಂಸ್ಥೆ ಗಮನಕ್ಕೆ ಮತ್ತು ನನ್ನ ಗಮನಕ್ಕೆ ಬಂದ ತಕ್ಷಣವೇ ನಮ್ಮ ಸಂಸ್ಥೆಯಿಂದ ಶಕ್ತಿದಳ ಅಂತ ಸರಕಾರಿ ಕಚೇರಿಗಳಲ್ಲಿ ಹಾಗೂ ಪ್ರಾವಿಟ್ ಕಂಪನಿಗಳಲ್ಲಿ ನಮ್ಮ ಸಂಸ್ಥೆಯಿಂದ ಉದ್ಯೋಗ ನೀಡ್ತಾ ಇದ್ದೀವಿ ನಮ್ಮ ಸಂಸ್ಥೆಯಿಂದ ಇನ್ನು ಒಂದರಿಂದ ಐದು ಯೋಜನೆಗಳನ್ನು ನಮ್ಮ ಸಂಸ್ಥೆಯಲ್ಲಿ ಇರುವು ಸಂಘದ ಸದಸ್ಯರಿಗೆ ನೀಡ್ತಾ ಇದ್ದೀವಿ ನೀವು ನಮ್ಮ ಸಂಸ್ಥೆಗೆ ಸದಸ್ಯರಾಗಿ ಸಾಕಷ್ಟು ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ ಎಂದು ಮಾತನಾಡಿದರು.

 ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರೇಣುಕಾ ಹೊಸೂರ ರಾಜ್ಯ ಮಹಿಳಾ ಸಂಚಾಲಕರು, ಸೀಮಾ ಹೊಸೂರ, ಮುತ್ತಣ್ಣ ಕರಾಳ, ಮದು ಹಾಸನ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು, ಅಬ್ದುಲ್ ಯಾದವಾಡ ರಾಮದುರ್ಗ ತಾಲೂಕ ಅಧ್ಯಕ್ಷರು, ಇನ್ನೂ ಅನೇಕ ಮುಖಂಡರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

 ವರದಿ: ಮಂಜುನಾಥ್ ಕಲಾದಗಿ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಯುವಕರ ಮೇಲೆ ತಲ್ವಾರ್ ದಾಳಿ ಕೇಸ್ : ಒಂದೇ ತಾಸಿನಲ್ಲಿ ಆರೋಪಿಗಳು ಅರೆಸ್ಟ್ ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕಾರ ಬೇವನೂರು ಗ್ರಾಮದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರ. ಚೇಳೂರು ಸರ್ಕಾರಿ ಆಸ್ಪತ್ರೆಗೆ ಬೇಕಿದೆ ಕಾಯಕಲ್ಪ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಗಿಗಳ ಪರದಾಟ.ಕಸ್ಕೋಟ ಸಸ್ಯರೋಗದಿಂದ ಬೆಳೆಹಾನಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು:ಗೋಪಾಲ ಎಂ ಪಿಎರಡು ಬಲಿಷ್ಠ ಬ್ಯಾಟಿಂಗ್ ತಂಡಗಳ ಕಾದಾಟ ಇಂದುಚೆನ್ನೆöÊ ಸೂಪರ್ ಕಿಂಗ್ಸ್ ತಂಡಕ್ಕೆ ಮಹತ್ವದ ಗೆಲುವುಜಾತಿ ನಿಂದನೆ : ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಜಾತಿ ನಿಂದನೆ : ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ