Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಯಂದಿರ ದಿನವೇ ಹೆತ್ತಮ್ಮನನ್ನು ಗುಂಡಿಕ್ಕಿ ಕೊಂದ ಪಾಪಿ ಮಗ

Advertisement

ಉತ್ತರ ಪ್ರದೇಶ : ಕ್ಷುಲ್ಲಕ ಆಸ್ತಿ ವಿಚಾರಕ್ಕಾಗಿ ನಡೆದ ಜಗಳವೊಂದು ಭೀಕರ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ನಡೆದಿದೆ.

ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಮಗನೇ ತನ್ನ ಹೆತ್ತ ತಾಯಿ ಹಾಗೂ ಸ್ವಂತ ತಮ್ಮನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಆರೋಪಿಯನ್ನು ರಾಜ್‌ಕಿಶೋರ್ ಗುಪ್ತಾ ಎಂದು ಗುರುತಿಸಲಾಗಿದೆ. ಈತನ ತಂದೆಯು ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ್ದರು. ಈ ನಿರ್ಧಾರಕ್ಕೆ ರಾಜ್‌ಕಿಶೋರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಮನೆಯಲ್ಲಿ ಪದೇ ಪದೇ ಜಗಳವಾಡುತ್ತಿದ್ದನು. ಇಂದು ಮುಂಜಾನೆ ಕೂಡ ಇದೇ ವಿಚಾರವಾಗಿ ತಾಯಿ ಮತ್ತು ತಮ್ಮನೊಂದಿಗೆ ರಾಜ್‌ಕಿಶೋರ್ ನಡುವೆ ಮಾತಿನ ಚಕಮಕಿ ನಡೆದಿದೆ.

ಪೊಲೀಸರ ಪರಿಶೀಲನೆ:

ಜಗಳ ತೀವ್ರ ಸ್ವರೂಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಆರೋಪಿಯು ತನ್ನ ಬಳಿಯಿದ್ದ ಬಂದೂಕಿನಿಂದ ತಾಯಿ ಮತ್ತು ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ.

ಇಂದು ಮುಂಜಾನೆ ಮನೆಯೊಳಗೆ ಗುಂಡಿನ ಸದ್ದು ಕೇಳಿ ಆತಂಕಗೊಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ-ಮಗ ಪತ್ತೆಯಾಗಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು:

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಪೊಲೀಸರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಗಾಯಗಳು ತೀವ್ರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ರಾನ್ಸ್ನಲ್ಲಿ ವಿಶ್ವದ ಅಗ್ರಗಣ್ಯ ನಾಯಕರ ಜಿ-೭ ಸಭೆರಾಜ್ಯದ ಅರ್ಹರಿಗಷ್ಟೇ ಗ್ಯಾರಂಟಿ ಯೋಜನೆಗಳು : ಎಂ. ಬಿ. ಪಾಟೀಲ ಬೆಂಗಳೂರಿನ ಹಲವು ಆರ್ ಟಿ ಓ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶಬೆಳಗಾವಿಯಲ್ಲಿ ಕಸದ ರಾಶಿಯಲ್ಲಿ ಒಟ್ಟು 59 ಜೀವಂತ ಗುಂಡುಗಳು ಪತ್ತೆಚಿಕ್ಕ ಪಾನ್ ಅಂಗಡಿಗೆ 1.85 ಲಕ್ಷ ರೂ. ವಿದ್ಯುತ್ ಬಿಲ್ : ಭಯದಿಂದ ವ್ಯಾಪಾರಿ ಆತ್ಮಹತ್ಯೆ ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಇಬ್ಬರು ಅಪ್ರಾಪ್ತ ಅಕ್ಕ-ತಂಗಿಯ ಮೇಲೆ ಕಿರಾತಕನಿಂದ ಲೈಂಗಿಕ ದೌರ್ಜನ್ಯಡಾಕ್ಟರ್ ಚೀಟಿ ಇಲ್ಲದೇ ಯಾವುದೇ ಕೆಮ್ಮಿನ ಔಷಧ ಮಾರಾಟ ಮಾಡುವಂತಿಲ್ಲ : ಕೇಂದ್ರ ಸರ್ಕಾರಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಸೋಮವತಿ ಅಮಾವಾಸ್ಯೆ ಅಂಗವಾಗಿ ಖಾನಾಪುರದಲ್ಲಿ ಶ್ರೀ ಮೈಲಾರ ಮಲ್ಲಣ್ಣನ ಪಲ್ಲಕ್ಕಿ ಉತ್ಸವ ವೈಭವ