LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Entertainment News

ವಿಶ್ವದಾದ್ಯಂತ ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ಬಿಡುಗಡೆ

Advertisement

ಬೆಂಗಳೂರು: ಕೆಜಿಎಫ್ 2 ಸಿನಿಮಾದ ಐತಿಹಾಸಿಕ ಯಶಸ್ಸಿನ ಬಳಿಕ ಕನ್ನಡಿಗರ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' (Toxic) ಚಿತ್ರ ಕೊನೆಗೂ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬಂದಿದೆ.

ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದ್ದ ಈ ಗ್ಯಾಂಗ್‌ಸ್ಟಾರ್ ಡ್ರಾಮಾ ಸಿನಿಮಾ ಬೊಂಬಾಟ್ ಓಪನಿಂಗ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.

ವಿಶ್ವದಾದ್ಯಂತ ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ಬಿಡುಗಡೆಯಾಗಿದೆ. ಇದು ಭಾರತೀಯ ಸಿನಿಮಾರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ರಿಲೀಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದರೊಂದಿಗೆ ಇತ್ತೀಚೆಗೆ ತೆರೆಕಂಡಿದ್ದ 'ಧುರಂಧರ್' ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳ ಸ್ಕ್ರೀನ್ ಕೌಂಟ್ ಹಾಗೂ ಮುಂಗಡ ಬುಕಿಂಗ್ ದಾಖಲೆಗಳನ್ನು ಟಾಕ್ಸಿಕ್ ಧೂಳೀಪಟ ಮಾಡಿದೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿರುವ ಈ ಚಿತ್ರ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಧೂಳೆಬ್ಬಿಸುತ್ತಿದೆ. ಒಟ್ಟು 6 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿರುವುದು ಜಾಗತಿಕ ಮಟ್ಟದಲ್ಲಿ ಸಿನಿಮಾದ ಕ್ರೇಜ್ ಹೆಚ್ಚಿಸಿದೆ.

ಕರ್ನಾಟಕ ಒಂದರಲ್ಲೇ 2,800ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಳ್ಳುತ್ತಿದ್ದು, ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಚಿತ್ರಮಂದಿರಗಳಲ್ಲೇ 50ಕ್ಕೂ ಅಧಿಕ ಶೋಗಳನ್ನು ಆಯೋಜಿಸಲಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮೊನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ.

ಚಿತ್ರದಲ್ಲಿ ಯಶ್ ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಸೇರಿದಂತೆ ಬೃಹತ್ ತಾರಾಗಣ ಅಭಿನಯಿಸಿದೆ. ರಾಜೀವ್ ರವಿ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಸಿನಿಮಾದ ಮೆರುಗನ್ನು ಹೆಚ್ಚಿಸಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST