LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Entertainment News

ಟಾಕ್ಸಿಕ್ ಟ್ರೈಲರ್ ಔಟ್ : ದ್ವಿ ಪಾತ್ರದಲ್ಲಿ ಮಿಂಚಿದ ಯಶ್, ಇಲ್ಲದೆ ಲಿಂಕ್ 

Advertisement

ನವದೆಹಲಿ: ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-Ups) ಸಿನಿಮಾದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. 

ಚಿತ್ರದ ಪಾತ್ರಗಳು, ಭೂಗತ ಪ್ರಪಂಚದ ಹಿನ್ನೆಲೆ ಹಾಗೂ ಕಥಾಹಂದರದ ಕುರಿತು ಟ್ರೇಲರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಂಪ್ಲೀಟ್ ಭಿನ್ನ ಗೆಟಪ್‌ಗಳಲ್ಲಿ ಮಿಂಚಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರವು ಆಗಸ್ಟ್ 26ರಂದು ಪ್ರಪಂಚದಾದ್ಯಂತ ಬಹುಭಾಷೆಗಳಲ್ಲಿ ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ.2022ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ 'ಕೆಜಿಎಫ್: ಚಾಪ್ಟರ್ 2' ಬಳಿಕ ಸುಮಾರು ನಾಲ್ಕು ವರ್ಷಗಳ ನಂತರ ಯಶ್‌ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ.

'ರಾಯ' ಮತ್ತು 'ಟಿಕೆಟ್' ಆಗಿ ಯಶ್ ದ್ವಿಪಾತ್ರ ಧಮಾಕ!

'ಟಾಕ್ಸಿಕ್' ಚಿತ್ರದಲ್ಲಿ ನಟ ಯಶ್ 'ರಾಯ' (Raya) ಮತ್ತು 'ಟಿಕೆಟ್' (Ticket) ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯ ಪಾತ್ರವು ಗಡ್ಡ, ಉದ್ದನೆಯ ಜುಟ್ಟು ಹೊಂದಿದ ರಗಡ್ ಮತ್ತು ಗ್ಯಾಂಗ್‌ಸ್ಟರ್ ಲುಕ್‌ನಲ್ಲಿದ್ದರೆ, ಟಿಕೆಟ್ ಪಾತ್ರವು ಅತ್ಯಂತ ಕಿರಿಯ ವಯಸ್ಸಿನ, ಸಂಪೂರ್ಣ ಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದೆ.

 ಈ ಎರಡು ಪಾತ್ರಗಳ ನಡುವಿನ ಸಂಬಂಧ ಹಾಗೂ ಕಥೆಯ ಟ್ವಿಸ್ಟ್‌ಗಳನ್ನು ಟ್ರೇಲರ್‌ನಲ್ಲಿ ರಹಸ್ಯವಾಗಿಡಲಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಬೆಳೆಯುವಂತೆ ಮಾಡಿದೆ.

https://youtu.be/sJwaiRN-rvc?si=hCB9W-oLNh_sJPlp

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST