Ad imageAd image

10.73 ಕೋಟಿಗೆ ರವೀಂದ್ರನಾಥ ಟ್ಯಾಗೋರ್‌ ಕಲಾಕೃತಿ ಮಾರಾಟ 

Bharath Vaibhav
10.73 ಕೋಟಿಗೆ ರವೀಂದ್ರನಾಥ ಟ್ಯಾಗೋರ್‌ ಕಲಾಕೃತಿ ಮಾರಾಟ 
WhatsApp Group Join Now
Telegram Group Join Now

ನವದೆಹಲಿ : ರವೀಂದ್ರನಾಥ ಟ್ಯಾಗೋರ್‌ ಅವರ ಕಲಾಕೃತಿ ‘ಫ್ರಮ್ ಅಕ್ರಾಸ್‌ ದ ಡಾರ್ಕ್‌’ ಹರಾಜೊಂದರಲ್ಲಿ ₹10.73 ಕೋಟಿಗೆ ಮಾರಾಟವಾಗಿದೆ.

ಡಿಸೆಂಬರ್‌ 14ರಿಂದ 17ರವರೆಗೆ ‘ಅಸ್ತಗುರು’ ಆಯೋಜಿಸಿದ್ದ ಹರಾಜಿನಲ್ಲಿ ₹163.65 ಕೋಟಿ ಮೌಲ್ಯದ 87 ವಸ್ತುಗಳು ಮಾರಾಟವಾಗಿವೆ.ತೈಯಬ್‌ ಮೆಹ್ತಾ ಅವರ, ‘ಅನ್‌ಟೈಟಲ್ಡ್‌ (ಗೆಸ್ಚರ್‌)’ ಕಲಾಕೃತಿ ₹53.54 ಕೋಟಿಗೆ ಮಾರಾಟವಾಗಿದೆ.‌

‘ಟ್ಯಾಗೋರ್‌ ಅವರು 1937ರಲ್ಲಿ ರಚಿಸಿದ್ದ ಕಲಾಕೃತಿಯು ಕತ್ತಲೆ-ಬೆಳಕು ಮತ್ತು ನೋವು ನಲಿವುಗಳ ಅದ್ಭುತ ಸಮ್ಮಿಲನವಾಗಿದೆ’ ಎಂದು ಹರಾಜು ಸಮಿತಿ ತಿಳಿಸಿದೆ.

ಕೃಷನ್ ಖನ್ನಾ ಅವರ ‘ದ ಲಾಸ್ಟ್ ಸೂಪರ್’ ಕಲಾಕೃತಿಯು ₹10.22 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ. ಬಕ್ರೆ ಅವರ ‘ಮೋನಾಲಿಸಾ’ ₹2.30 ಕೋಟಿಗೆ ಮಾರಾಟವಾಗುವ ಮೂಲಕ ವಿಶ್ವದಾಖಲೆಯನ್ನು ಮಾಡಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!