Ad imageAd image

ಹಿಂದೂ ದೇವತೆ ವೇಷ ಹಾಕಿ ವಿಕೃತಿ : ಟಾಮಿ ಜೆನೆಸಿಸ್ ವಿರುದ್ಧ ಆಕ್ರೋಶ 

Bharath Vaibhav
ಹಿಂದೂ ದೇವತೆ ವೇಷ ಹಾಕಿ ವಿಕೃತಿ : ಟಾಮಿ ಜೆನೆಸಿಸ್ ವಿರುದ್ಧ ಆಕ್ರೋಶ 
WhatsApp Group Join Now
Telegram Group Join Now

ನವದೆಹಲಿ: ಸಾಂಗ್‌ ಹೆಸರಿನಲ್ಲಿ ಹಿಂದೂ ದೇವರುಗಳಿಗೆ (Hindu God) ಅವಮಾನ ಮಾಡುವ ಪ್ರಕರಣಗಳು ಹೆಚ್ಚಾಗಿದೆ.

ಇದೀಗ ಇಂಡೋ ಕೆನೆಡಿಯನ್ ರ‍್ಯಾಪರ್ (Rapper) ಟಾಮಿ ಜೆನೆಸಿಸ್ (Tommy Genesis), ಹಿಂದೂ ದೇವತೆ ವೇಷ ಹಾಕಿ ವಿಕೃತಿ ಮೆರೆದಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.

ಕಾಳಿ ಮಾತೆಯ ವೇಷದಲ್ಲಿ ಧೂಮಪಾನ

ಟಾಮಿ, ಇತ್ತೀಚಿನ ಮ್ಯೂಸಿಕ್ ವೀಡಿಯೊ ‘ಟ್ರೂ ಬ್ಲೂ’ ನಲ್ಲಿ ಕಾಳಿ ದೇವಿಯ ವೇಷ ಧರಿಸಿದ್ದು, ಅದರ ಜೊತೆಗೆ ಧೂಮಪಾನ ಸಹ ಮಾಡಿದ್ದಾರೆ. ಈ ಕಾರಣಗಳಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದು, ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಜೆನೆಸಿಸ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಅವರು ನೀಲಿ ಬಣ್ಣವನ್ನ ಮೈ ತುಂಬ ಬಳಿದುಕೊಂಡಿದ್ದು, ಚಿನ್ನದ ಆಭರಣಗಳಿಂದ ಅಲಂಕರ ಮಾಡಿಕೊಂಡು, ಕೆಂಪು ಬಿಂದಿಯನ್ನ ಇಟ್ಟುಕೊಂಡಿದ್ದಾರೆ.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಈ ಹಾಡನ್ನ ಡಿಲೀಟ್‌ ಮಾಡುವಂತೆ ಒತ್ತಾಯಿಸಲಾಗಿದೆ. ಅಲ್ಲದೇ, ಎಲ್ಲರೂ ಇದನ್ನ ರಿಪೋರ್ಟ್‌ ಮಾಡುವಂತೆ ಸಹ ಆಗ್ರಹಿಸಲಾಗಿದೆ.

ಪ್ರತಿಭೆಯನ್ನ ತೋರಿಸುವ ನೆಪದಲ್ಲಿ ಇನ್ನೊಬ್ಬರ ಭಾವನೆಗಳಿಗೆ ನೋವು ಮಾಡುವುದು ಸರಿಯಲ್ಲ. ಈ ರೀತಿ ಮಾತ್ರವಲ್ಲದೇ, ಕ್ರಿಸ್ಟಿಯನ್‌ ಧರ್ಮದ ಕ್ರಾಸ್‌ ಅನ್ನು ತೆಗೆದುಕೊಂಡು ನೆಕ್ಕಿದ್ದರೆ. ಒಟ್ಟಾರೆ, ಅವರ ಈ ನಡೆ ಆಕ್ರೋಶವನ್ನ ಹುಟ್ಟುಹಾಕಿದೆ.

WhatsApp Group Join Now
Telegram Group Join Now
Share This Article
error: Content is protected !!