Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇನ್ನರ್ ವೀಲ್ ಇಂದ “ಐ ಲವ್ ತುರುವೇಕೆರೆ”ನಾಮಫಲಕ ಅನಾವರಣ

Advertisement

ತುರುವೇಕೆರೆ : ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ, ಸಂಕಲ್ಪ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೃತಜ್ಞತಾ ದಿನದ ಸಮಾರಂಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಹೆಚ್.ನಂಜಪ್ಪನವರ ಸ್ಮರಣಾರ್ಥ ಪಟ್ಟಣದ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ “ಐ ಲವ್ ತುರುವೇಕೆರೆ” ನಾಮಫಲಕವನ್ನು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ರಾಜ್ಯದ ಮಹಿಳಾ ಸೇವಾ ಸಂಸ್ಥೆಗಳ ಪೈಕಿ ಇನ್ನರ್ ವೀಲ್ ಕ್ಲಬ್ ಅತಿ ಹೆಚ್ಚು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಅಶಕ್ತರು, ಅಸಹಾಯಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಮಹಿಳೆಯರು ಮುಂಚೂಣಿಯಲ್ಲಿ ನಿಂತು ನೆರವಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು. 

news_1782819199_0_880.webp

 

ಇನ್ನರ್ ವೀಲ್ ಸಂಸ್ಥೆ ಕೇವಲ ಮಹಿಳೆಯರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸದೆ ಶಾಲಾ ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಅಗತ್ಯ ಪಾಠೋಪಕರಣ, ಪೀಠೋಪಕರಣ ಒದಗಿಸುತ್ತಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಅಗತ್ಯ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ, ಪರಿಸರ ಸಂರಕ್ಷಣೆ, ಬಸ್ ನಿಲ್ದಾಣದಲ್ಲಿ ತಂಗುದಾಣ ನಿರ್ಮಾಣದಂತಹ ಶಾಶ್ವತ ಕಾರ್ಯಕ್ರಮಗಳನ್ನು ನಡೆಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇನ್ನರ್ ವೀಲ್ ಸಂಸ್ಥೆ ಕೈಗೊಳ್ಳುವ ದೊಡ್ಡ ಮಟ್ಟದ ಸೇವಾ ಕಾರ್ಯದಲ್ಲಿ ಹಾಲಪ್ಪ ಪ್ರತಿಷ್ಠಾನ ಕೈಜೋಡಿಸಲಿದೆ ಎಂದು ಭರವಸೆ ನೀಡಿದರು. 

ತಹಸೀಲ್ದಾರ್ ಕುಂಇ ಅಹಮದ್ ಮಾತನಾಡಿ, ಕೌಟುಂಬಿಕ ಜವಾಬ್ದಾರಿಗಳ ನಡುವೆ ತಾಯಂದಿರು ಇನ್ನರ್ ವೀಲ್ ಸಂಸ್ಥೆಯ ಸದಸ್ಯರಾಗಿ ಸಾಮಾಜಿಕ ಬದ್ಧತೆಯೊಂದಿಗೆ ನಿಸ್ವಾರ್ಥ ಮನೋಭಾವದಿಂದ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವುದು ಸಂತೋಷದ ಸಂಗತಿಯಾಗಿದೆ. ಪ್ರಮುಖವಾಗಿ ತಾಯಂದಿರು ತುರುವೇಕೆರೆ ಪಟ್ಟಣದಲ್ಲಿ ಎರಡು ಹಾಗೂ ದಂಡಿನಶಿವರದಲ್ಲಿ ಒಂದು ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿರುವುದು ತಾಯಂದಿರ ನೆರಳು ನೀಡುವ ಗುಣಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

news_1782819220_0_997.webp

 

ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಸುಂಕಲಾಪುರ ಸರ್ಕಾರಿ ಶಾಲೆಗೆ ನಲಿಕಲಿ ಟೇಬಲ್, ಬಾಲಕಿಯರ ಸರ್ಕಾರಿ ಪಪೂ ಕಾಲೇಜಿಗೆ ಕಂಪ್ಯೂಟರ್ ಟೇಬಲ್ ಅನ್ನು ಡಾ.ಶುಭ, ಮಾದಿಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನನ್ನು ಭಾಗ್ಯ ಸಿದ್ದೇಶ್, ಅಂಚಿಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗನ್ನು ಮಾನಸರಘು, ಹುಲಿಕಲ್ ಶಾಲಾ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಅನ್ನು ಪ್ರಭಾಕರ್, ಕಲ್ಕೆರೆ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಯನ್ನು ಲೀಲಾನಾಗರಾಜ್ ಕೊಡುಗೆಯಾಗಿ ನೀಡಿದರು. ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಪಪಂ ಮಾಜಿ ಅಧ್ಯಕ್ಷ ಶಶಿಶೇಖರ್, ಸಂಕಲ್ಪ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಚೌದ್ರಿ, ಇನ್ನರ್ ವೀಲ್ ಕಾರ್ಯದರ್ಶಿ ಮಮತಾ ಅಶೋಕ್, ಟ್ರಸ್ಟ್ ಕಾರ್ಯದರ್ಶಿ ಲತಾಪ್ರಸನ್ನ, ಖಜಾಂಚಿ ಸವಿತಾ ಅನಿಲ್ ಸೇರಿದಂತೆ ಕ್ಲಬ್ ನ ಸದಸ್ಯರು, ನಾಗರೀಕರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಮತದಾರರು ಸಹಕರಿಸಿ : ತಹಸೀಲ್ದಾರ್ ಕುಂಇ ಅಹಮದ್ಜುಲೈ 04 ರಂದು ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಇನ್ನರ್ ವೀಲ್ ಇಂದ “ಐ ಲವ್ ತುರುವೇಕೆರೆ”ನಾಮಫಲಕ ಅನಾವರಣಉಪ್ಪು ನೀರು ಬೇಡ, ಸಿಹಿ ನೀರು ಸರಬರಾಜು ಮಾಡಿ : 11 ನೇ ವಾರ್ಡಿನ ನಾಗರೀಕರ ಆಗ್ರಹತ್ರ್ಯಂಬಕೇಶ್ವರ ದೇವಾಲಯದ ಅಮೃತಕುಂಡದಲ್ಲಿ ಶಿವಲಿಂಗ ಗೋಚರಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೇ ಗ್ಯಾರಂಟಿ ಯೋಜನೆಗಳು ಸಿಗಲ್ಲ : ಡಿ.ಕೆ.ಶಿವಕುಮಾರ್ ಜಮೀನು ವಿಚಾರವಾಗಿ ಅಣ್ಣ-ತಮ್ಮನ ನಡುವೆ ಜಗಳ: ತಮ್ಮನ ಕೊಲೆಯಲ್ಲಿ ಅಂತ್ಯವಿವಾಹಿತ ಮಹಿಳೆಯನ್ನು ಓಡಿಸಿಕೊಂಡು ಹೋದ ಯುವಕ : ಯುವಕನ ಮನೆ ಧ್ವಂಸ ಮಾಡಿದ ಗುಂಪು ಅಕ್ರಮ ಪಡಿತರ ಮಾರಾಟ ಕಡಿವಾಣಕ್ಕೆ ಡಿಎಸ್ಎಸ್ ಅಗ್ರಹ!ಪೂಜಾರಿ ಗುರುಕುಲ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ