Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತ್ರ್ಯಂಬಕೇಶ್ವರ ದೇವಾಲಯದ ಅಮೃತಕುಂಡದಲ್ಲಿ ಶಿವಲಿಂಗ ಗೋಚರ

Advertisement

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪ್ರಸಿದ್ಧ ತ್ರ್ಯಂಬಕೇಶ್ವರ ದೇವಾಲಯದ ಆವರಣದಲ್ಲಿರುವ ಐತಿಹಾಸಿಕ ಅಮೃತಕುಂಡದಲ್ಲಿ ಹಲವು ದಶಕಗಳ ಬಳಿಕ ಶಿವಲಿಂಗವು ಗೋಚರವಾಗಿದೆ. 

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಕೈಗೊಂಡಿರುವ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾಮಗಾರಿಗಳ ವೇಳೆ ಈ ಅಪರೂಪದ ಆವಿಷ್ಕಾರ ಬೆಳಕಿಗೆ ಬಂದಿದೆ.

ಹೌದು. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪ್ರಸಿದ್ಧ ತ್ರ್ಯಂಬಕೇಶ್ವರ ದೇವಾಲಯದ ಐತಿಹಾಸಿಕ ಅಮೃತಕುಂಡದಲ್ಲಿ ಹಲವು ದಶಕಗಳ ಬಳಿಕ ಶಿವಲಿಂಗವು ಗೋಚರಿಸಿದ್ದು, ಭಕ್ತರಲ್ಲಿ ಭಾರೀ ಸಂಭ್ರಮ ಮೂಡಿಸಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಕೈಗೊಂಡಿರುವ ಸಂರಕ್ಷಣೆ ಕಾಮಗಾರಿಗಳ ವೇಳೆ ಕುಂಡದ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸಿದಾಗ ಸುಮಾರು 65 ಅಡಿ ಆಳದಲ್ಲಿದ್ದ ಶಿವಲಿಂಗ ದರ್ಶನ ನೀಡಿದೆ.

ಅಮೃತಕುಂಡದಲ್ಲಿದ್ದ ನೀರನ್ನು ಸಂಪೂರ್ಣವಾಗಿ ಹೊರತೆಗೆದು ಸ್ವಚ್ಛಗೊಳಿಸಿದಾಗ ಸುಮಾರು 65 ಅಡಿ ಆಳದಲ್ಲಿ ಶಿವಲಿಂಗ ಕಾಣಿಸಿಕೊಂಡಿದೆ. ಪೇಶ್ವೆಗಳ ಕಾಲಕ್ಕೆ ಸೇರಿದ ಈ ಪುರಾತನ ಅಮೃತಕುಂಡದ ನೀರನ್ನೇ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗದ ಪೂಜೆ ಹಾಗೂ ಅಭಿಷೇಕಗಳಿಗೆ ಬಳಸಲಾಗುತ್ತದೆ. ವಾಸ್ತವವಾಗಿ 2026ರ ಸಿಂಹಸ್ಥ ಕುಂಭಮೇಳದ ಸಿದ್ಧತಾ ಕಾಮಗಾರಿಗಳ ಸಂದರ್ಭದಲ್ಲಿ ಈ ಶಿವಲಿಂಗದ ಅಸ್ತಿತ್ವ ಪತ್ತೆಯಾಗಿತ್ತು.

ಇದೀಗ ಪುರಾತತ್ವ ಇಲಾಖೆ ಕೈಗೊಂಡಿರುವ ಸಂರಕ್ಷಣಾ ಕಾರ್ಯಗಳ ಭಾಗವಾಗಿ ಕುಂಡದ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಬಳಿಕ ಶಿವಲಿಂಗ ಸ್ಪಷ್ಟವಾಗಿ ಗೋಚರಿಸಿದೆ.

ಸಾಮಾನ್ಯವಾಗಿ ಅಮೃತಕುಂಡದಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತದೆ. ಆದ್ದರಿಂದ ಕುಂಡದ ತಳದಲ್ಲಿರುವ ಶಿವಲಿಂಗ ಭಕ್ತರ ಕಣ್ಣಿಗೆ ಕಾಣಿಸುವುದಿಲ್ಲ. ಹಲವು ವರ್ಷಗಳ ಬಳಿಕ ನೀರನ್ನು ಸಂಪೂರ್ಣವಾಗಿ ಹೊರತೆಗೆದ ಪರಿಣಾಮ ಈ ಅಪರೂಪದ ದರ್ಶನ ಸಾಧ್ಯವಾಗಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ. ಆದರೆ ಭದ್ರತಾ ಕಾರಣಗಳಿಂದ ಸಾಮಾನ್ಯ ಭಕ್ತರಿಗೆ ಅಮೃತಕುಂಡದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ. ನಾಸಿಕ್ ನಗರದಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿರುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ತ್ರ್ಯಂಬಕೇಶ್ವರ ದೇವಾಲಯವು ದೇಶದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಇಲ್ಲಿ ಶಿವಲಿಂಗವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ತ್ರಿಮೂರ್ತಿಗಳ ಸಂಕೇತವಾಗಿ ಪೂಜಿಸಲ್ಪಡುತ್ತದೆ. ಅಲ್ಲದೆ, ಪವಿತ್ರ ಗೋದಾವರಿ ನದಿಯ ಉಗಮಸ್ಥಳವೂ ಇದೇ ಆಗಿರುವುದರಿಂದ ಈ ಕ್ಷೇತ್ರಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತ್ರ್ಯಂಬಕೇಶ್ವರ ದೇವಾಲಯದ ಅಮೃತಕುಂಡದಲ್ಲಿ ಶಿವಲಿಂಗ ಗೋಚರಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೇ ಗ್ಯಾರಂಟಿ ಯೋಜನೆಗಳು ಸಿಗಲ್ಲ : ಡಿ.ಕೆ.ಶಿವಕುಮಾರ್ ಜಮೀನು ವಿಚಾರವಾಗಿ ಅಣ್ಣ-ತಮ್ಮನ ನಡುವೆ ಜಗಳ: ತಮ್ಮನ ಕೊಲೆಯಲ್ಲಿ ಅಂತ್ಯವಿವಾಹಿತ ಮಹಿಳೆಯನ್ನು ಓಡಿಸಿಕೊಂಡು ಹೋದ ಯುವಕ : ಯುವಕನ ಮನೆ ಧ್ವಂಸ ಮಾಡಿದ ಗುಂಪು ಅಕ್ರಮ ಪಡಿತರ ಮಾರಾಟ ಕಡಿವಾಣಕ್ಕೆ ಡಿಎಸ್ಎಸ್ ಅಗ್ರಹ!ಪೂಜಾರಿ ಗುರುಕುಲ ಶಾಲೆಯಲ್ಲಿ ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ಕುಂದು ಕೊರತೆ  ಸಭೆಗ್ರಾಹಕರಿಗೆ ಶಾಕ್ : ಪ್ರತಿ ಕೆಜಿಗೆ ಅಕ್ಕಿ ದರ 13 ರೂ. ವರೆಗೆ ಹೆಚ್ಚಳ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಹೇರಲಾಗಿದ್ದ ನಿರ್ಬಂಧಗಳ ತೆರವು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ