ಈಚೆಗೆ ಮುಗಿದ 20 ನೇ ಎಶಿಯನ್ ಗೇಮ್ಸ್ ಕ್ರೀಡಾಕೂಟ ಭಾರತ ಕ್ರೀಡಾ ವಲಯಕ್ಕೆ ಹೊಸ ಹುರುಪು ತಂದುಕೊಟ್ಟಿದೆ. ವಿಶೇಷವಾಗಿ ಇಂದಿನ ಯುವ ಪೀಳಿಗೆಯ ಕ್ರೀಡಾಳುಗಳು ಮಿಂಚಿನ ಸಾಧನೆ ತೋರಿದ್ದಾರೆ. ಆ ಮೂಲಕ ಭಾರತ ಕ್ರೀಡಾ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ.
ಮಹಿಳಾ ಕ್ರೀಡಾಲುಗಳು ಭಾರತ ನಿಯೋಗದ ನೇತೃತ್ವ ವಹಿಸಿದ್ದರು. ಭಾರತ ಗೆದ್ದ 85 ಪದಕಗಳಲ್ಲಿ ಬಹುತೇಕ ಪದಕಗಳು ಮಹಿಳಾ ಕ್ರೀಡಾಳುಗಳ ಸಾಧನೆಯಿಂದಲೇ ಬಂದವು. ಭಾರತ 4 ನೇ ಸ್ಥಾನ ಪಡೆಯಿತು. ಮುಂದಿನ ಕೂಟಗಳಲ್ಲಿ ಮತ್ತಷ್ಟು ಉತ್ತಮ ಸಾಧನೆ ತೋರುವ ಭರವಸೆ ಸಿಕ್ಕಿದೆ.


