Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಮಾರು ೩೦ಬಾರಿ ಮನವಿ ಮಾಡಿದರು ಕ್ಯಾರೇ ಎನ್ನುತ್ತಿಲ್ಲ ಮೇದಕ್ ಗ್ರಾಮ ಪಂಚಾಯತ್ ಅಧಿಕಾರಿ ರಾಮಪ್ಪ

Advertisement

ಸೇಡಂ: ತಾಲೂಕಿನ ಸಿಲಾರಕೋಟ್ ಗ್ರಾಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ಎದುರುಗಡೆ ಬೇಸಿಗೆಯಲ್ಲೇ ಕೆಸರುಗದ್ದೆಯಾಗಿ ಹೊಲಸು ನೀರು ಹರಿಯುತ್ತಿವೆ. 

ಈ ರಸ್ತೆಯು ಊರಿನಲ್ಲಿ ಮುಖ್ಯರಸ್ತೆಯಾಗಿದ್ದು ವಾಹನಗಳು ಓಡಾಡುವಾಗ ನೀರೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಮೇಲೆ ಚೆಲ್ಲುತ್ತಿವೆ ಈ ಸ್ವಚತೆ ಮತ್ತು ರಸ್ತೆ ಸುಧಾರಣೆಗೆ ಸುಮಾರು ೩೦ ಬಾರಿ ಮನವಿ ಮಾಡಿದರು ಕೂಡ ಗ್ರಾಮ ಪಂಚಾಯತ್ ಅಧಿಕಾರಿ ರಾಮಪ್ಪ ಕ್ಯಾರೆ ಎನ್ನದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. 

news_1778597585_0_206.webp

 

ಈ ರಸ್ತೆ ನಮ್ಮ ಲೆಕ್ಕದಲ್ಲಿ ಇಲ್ಲಾ ಎಂದು ಕೆಲವೊಮ್ಮೆ ಉತ್ತರ ನೀಡುತ್ತಿದ್ದಾರೆ. ಆದರೆ ಈ ರಸ್ತೆ ಪಕ್ಕದಲ್ಲಿ ಮೋರಿ ನಿರ್ಮಿಸಲು ಅನುಧಾನ ಬೀಡುಗಡೆಯಾಗಿದೆ ಹಾಗೂ ರಸ್ತೆ ಸುಧಾರಣೆಗೆ ಕೂಡ ಅನುಧಾನ ಬೀಡುಗಡೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಹಿಂದೆ ರಸ್ತೆ ಸಂಪೂರ್ಣ ನಿರ್ಮಾಣಕ್ಕೆ ಅನುಧಾನ ಬಿಡುಗಡೆಯಾದಾಗ ಗುತ್ತಿಗೆದಾರರು ಕೇವಲ ಬಸ್ ನಿಲ್ದಾಣದಿಂದ ಸಿದ್ದಪ್ಪ ಅವರ ಮನೆವರೆಗೆ ಮತ್ತು ಸಿದ್ದೇ ನಾಗಯ್ಯ ಹೋಟೆಲ್ ನಿಂದ ಮಸೀದಿ ವರೆಗೆ ರಸ್ತೆ ಸುಧಾರಣೆ ಮಾಡಿ ಮಧ್ಯದಲ್ಲಿರುವ ರಸ್ತೆಯನ್ನು ಹಾಗೆ ಬಿಟ್ಟುಹೋಗಿದ್ದಾರೆ ಅಂದರೆ ಇದು ಮಾದಿಗ ಸಮಾಜದ ಕಾಲೋನಿಯಾಗಿರುತ್ತದೆ. 

ಊರಿನ ಮುಖಂಡರೆಲ್ಲಾ ಸೇರಿ ಜಾತಿಬೇಧವಿಲ್ಲ ಎಂಬಂತೆ ಪ್ರವರ್ತನೆ ಮಾಡುತ್ತಲೇ ಇಲ್ಲಿ ಜಾತಿಬೇಧ ಮಾಡಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ಕುರಿತು ಪಿಡಿಓ ರಾಮಪ್ಪ ಅವರಿಗೆ ಅನೇಕ ಬಾರಿ ಮನವಿ ಮಾಡಿದರು ಸಹ ರಾಜಕೀಯ ನಾಯಕರುಗಳ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಈ ರೀತಿ ನೀರು ನಿಂತು ಜನರಿಗೆ ತೊಂದರೆಯಾಗುತ್ತಿದುಲ್ಲದೆ ಒಬ್ಬ ಮಹಾನ್ ನಾಯಕನಿಗೆ ಅವಮಾನ ಮಾಡುತ್ತಿರುವಂತಿದೆ ಅಧಿಕಾರಿಗಳ ವರ್ತನೆ.  ಕೂಡಲೇ ರಸ್ತೆ ಸುಧಾರಣೆ ಮಾಡಿಕೊಡಬೇಕು ಇಲ್ಲವಾದಲ್ಲಿ ಪಂಚಾಯತ್ ಮುತ್ತಿಗೆ ಹಾಕಿ ಅಧಿಕಾರಿಗಳ ಅಮಾನತು ಮಾಡುವ ತನಕ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಕೂಡ ಇದೆ ಸಣ್ಣಮಕ್ಕಳಿಗೆ ಹೋಗಿಬರಲು ತೊಂದರೆಯಾಗುತ್ತಿದೆ. ಬಾಕ್ಸ್:ಈ ಹಿಂದೆ ನಮ್ಮ ಸಂಘಟನೆ ವತಿಯಿಂದ ಮನವಿ ಪತ್ರ ನೀಡಲಾಯಿತು. ಪಂಚಾಯತ್ ಎದುರುಗಡೆ ಪ್ರತಿಭಟನೆ ಕೂಡ ಮಾಡಲಾಯಿತು ಆದರೂ ಕೂಡ ಅಧಿಕಾರಿಗಳು  ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡರೆ ಇವರ ಹಿಂದೆ ಯಾರೋ ಸ್ಥಳೀಯ ನಾಯಕರೇ ಇರಬಹುದು ಎಂಬ ಅನುಮಾನಗಳಿವೆ. ಮುಂದಿನ ದಿನಗಳಲ್ಲಿ ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕು ಪಂಚಾಯತ್ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು.   ಸಾಬಪ್ಪ ಅಬ್ಬಗಳ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಕಾರ್ಯಾಧ್ಯಕ್ಷರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಆರ್‌ಸಿಬಿ- ಕೆಕೆಆರ್ ಪಂದ್ಯಸುಮಾರು ೩೦ಬಾರಿ ಮನವಿ ಮಾಡಿದರು ಕ್ಯಾರೇ ಎನ್ನುತ್ತಿಲ್ಲ ಮೇದಕ್ ಗ್ರಾಮ ಪಂಚಾಯತ್ ಅಧಿಕಾರಿ ರಾಮಪ್ಪಪತಿಯೊಂದಿಗೆ ವಾಸಿಸುತ್ತಿಲ್ಲ ಎಂಬ ನೆಪದಲ್ಲಿ ಪತ್ನಿ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ : ಹೈಕೋರ್ಟ್ ಸಾರಿಗೆ ನೌಕರರ ಶೇ.12.50 ರಷ್ಟು ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಟೆಸ್ಟ್ ಕ್ರಿಕೆಟ್: ಪಾಕ್ ವಿರುದ್ಧ ಬಾಂಗ್ಲಾಗೆ ಜಯಕನ್ನೆರಿ ಶ್ರೀಗಳ ಸಾನಿಧ್ಯದಲ್ಲಿ ಹಿಂದುಗಳು ನಾವೆಲ್ಲ ಒಂದು ಶಕ್ತಿ ಎಂಬ ಕಾರ್ಯಕ್ರಮಶ್ರೀಲಂಕಾದಿಂದ ಬರೋಬ್ಬರಿ 10 ಗಂಟೆ 45 ನಿಮಿಷ ಈಜಿ ದಡ ತಲುಪಿದ ದಂಪತಿ ಸರ್ ನನ್ನ ಹೆಂಡತಿಯ ಮದುವೆಯನ್ನು ತಪ್ಪಿಸಿ : ಬೆಳಗಾವಿಯಲ್ಲಿ ಪತಿಯ ಗೋಳಾಟ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರತಿ ಪ್ರಶ್ನೆ ಪತ್ರಿಕೆ ಲಕ್ಷಕ್ಕೆ ಮಾರಾಟ : ಮಾಸ್ಟರ್ ಮೈಂಡ್ ಅರೆಸ್ಟ್ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ: ತನಿಖೆ ಕೈಗೆತ್ತಿಕೊಂಡ CBI