ಆಲೂರು: ಕರ್ನಾಟಕ ಕ್ರಿಕೆಟ್ ತಂಡವು ಇಂದಿನಿಂದ ಇಲ್ಲಿ ಶುರುವಾಗಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸೌರಾಷ್ಟ್ರ ವಿರುದ್ಧದ ಪಂದ್ಯದ ಮೊದಲ ದಿನ ಭೋಜನ ವಿರಾಮದ ವೇಳೆಗೆ 2 ವಿಕೆಟ್ ಗೆ 91 ರನ್ ಗಳಿಸಿತ್ತು.
ಬೆಂಗಳೂರು ಸಮೀಪದ ಆಲೂರು ಕೆಎಸ್ ಸಿಎ ಮೈದಾನದಲ್ಲಿ ಶುರುವಾದ ಪಂದ್ಯದಲ್ಲಿ ಮೊದಲು ಕರ್ನಾಟಕ ತಂಡವು ಬ್ಯಾಟಿಂಗ್ ಗೆ ಇಳಿಯಿತು. ಆಟಗಾರರು ಭೋಜನಕ್ಕೆ ಹೋದಾಗ ಕೆ. ವಿ. ಅನಿಸ್ 50 ಹಾಗೂ ಮಯಂಕ್ ಅಗರವಾಲ್ 34 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.


