ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆಯಬೇಕಿದ್ದ 5 ನೇ ಹಾಗೂ ಕೊನೆಯ ಟಿ-20 ಪಂದ್ಯ ಮಳೆಯ ಕಾರಣ ಪೂರ್ಣಗೊಳ್ಳದೇ ಫಲಿತಾಂಶ ಬರಲಿಲ್ಲ. ಇದರಿಂದ 5 ಪಂದ್ಯಗಳ ಸರಣಿ 2-2 ರಿಂದ ಸಮಗೊಂಡಿತು.
ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಬಿಟ್ಟು ಬಿಡದೇ ಸುರಿದ ಮಳೆಯಿಂದ ಪೂರ್ಣ ಪಂದ್ಯ ನಡೆಯಲಿಲ್ಲ. 9 ಓವರ್ ಗಳ ಪಂದ್ಯ ನಿಗದಿಯಾಗಿ 7.4 ಓವರ್ ಗಳ ಆಟ ಮಾತ್ರ ನಡೆಯಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ 5 ವಿಕೆಟ್ ಗೆ 114 ರನ್ ಗಳಿಸಿತ್ತು.


