ಐಚಿ ನಗೋಯಾ( ಜಪಾನ್ ):ಭಾರತ ಸೂಟಿಂಗ್ ತಂಡವು ಇಲ್ಲಿ ನಡೆದಿರುವ 20 ನೇ ಎಶಿಯನ್ ಗೇಮ್ಸ್ ಕ್ರೀಡಾಕೂಟದ 10 ಮೀಟರ್ ಏರ್ ರೈಫಲ್ ನಲ್ಲಿ ಬೆಳ್ಳಿ ಪದಕ ಪಡೆಯುವುದರ ಮೂಲಕ ತನ್ನ ಶೂಟಿಂಗ್ ಸ್ಪರ್ಧೆಯ ಅಭಿಯಾನ ಶುರು ಮಾಡಿದೆ.
ನಗೋಯಾ ನಗರದಲ್ಲಿ ರವಿವಾರ ನಡೆದ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಳುಗಳಾದ ಎಲವೆನಿಲ್ ವಲಾರಿವನ್, ಸೋನಮ್ ಮಾಸಕರ ಹಾಗೂ ವಿದರಶ್ ವಿನೋದ್ ಜೊತೆಯಾಗಿ 1898.0 ಪಾಯಿಂಟ್ ಗಳನ್ನು ಸಂಗ್ರಹಿಸಿ ದ್ವಿತೀಯ ಸ್ಥಾನ ಪಡೆದರು.


