ತಮಿಳುನಾಡು : ತಮಿಳುನಾಡಿನಲ್ಲಿ ಇಂದಿನಿಂದ ದಳಪತಿ ದರ್ಬಾರ್ ಆರಂಭವಾಗಲಿದೆ. ಪಟ್ಟಾಭಿಷೇಕಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದ್ದು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಇಂದು ಸಿ ಜೋಸೆಫ್ ವಿಜಯ ಪದಗ್ರಹಣ ಮಾಡಲಿದ್ದಾರೆ. ಪ್ರಮಾಣವಚನ ಸ್ವೀಕರಿಸುವಂತೆ ರಾಜ್ಯಪಾಲರು ಆಹ್ವಾನ ನೀಡಿದ್ದಾರೆ ಲೋಕಭವನದಲ್ಲಿ ವಿಜಯ್ ಗವರ್ನರ್ ಆಹ್ವಾನ ನೀಡಿದ್ದಾರೆ.
ತಮಿಳುನಾಡು ಸಿಎಂ ಆಗಿ ವಿಜಯ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು ಮೇ 13ರ ಒಳಗೆ ವಿಶ್ವಾಸಮತ ಯಾಚನೇ ಮಾಡಲಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದು ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ಪ್ರಮಾಣವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿ ಆಗಲಿದ್ದಾರೆ.
ವಿಜಯ್ ನಿಯೋಜಿತ ಸಿಎಂ ಎಂದು ಗವರ್ನರ್ ಉಲ್ಲೇಖ ಮಾಡಿದ್ದು, ವಿಜಯಗೆ ನೀಡಿರುವ ಆಹ್ವಾನ ಪತ್ರದಲ್ಲಿ ಗವರ್ನರ್ ಉಲ್ಲೇಖಿಸಿದ್ದಾರೆ ಮಿತ್ರ ಪಕ್ಷಗಳ ನಾಯಕರು ಸಮ್ಮುಖದಲ್ಲಿ ನೀಡಿದ್ದಾರೆ.

