ಭಟ್ಕಳ: ಕ್ರೀಡಾ ಲೋಕದ ಇಂದಿನ ವಿಶೇಷ ಸುದ್ದಿಗೆ ಸ್ವಾಗತ. ಕರಾವಳಿ ತೀರದ ಭಟ್ಕಳದಲ್ಲಿ ಈಗ ಸ್ನಾಯುಗಳ ಪ್ರದರ್ಶನದ ಹಬ್ಬ ಶುರುವಾಗಲಿದೆ. ‘ಭಟ್ಕಳ ಬ್ರದರ್ಸ್’ ಆಯೋಜನೆಯಲ್ಲಿ ರಾಜ್ಯ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ ‘ಮಿಸ್ಟರ್ ಭಟ್ಕಳ – 2026’ ಆಯೋಜಿಸಲಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಸ್ಪರ್ಧೆಯ ವಿವರ: ಕರ್ನಾಟಕ ರಾಜ್ಯ ಮಟ್ಟದ ಈ ಪ್ರತಿಷ್ಠಿತ ದೇಹದಾರ್ಢ್ಯ ಸ್ಪರ್ಧೆಯು ಫೆಬ್ರವರಿ 22, ಭಾನುವಾರ ಸಂಜೆ 6 ಗಂಟೆಗೆ ಭಟ್ಕಳದ ಸಾಗರ್ ರಸ್ತೆಯ ಪೊಲೀಸ್ ಮೈದಾನದ ಬಳಿ ನಡೆಯಲಿದೆ. ತೂಕದ ವಿಭಾಗಗಳು: ಸ್ಪರ್ಧೆಯು ಒಟ್ಟು 8 ವಿಭಾಗಗಳಲ್ಲಿ ನಡೆಯಲಿದ್ದು, 55 ಕೆಜಿ ಯಿಂದ ಹಿಡಿದು 85 ಕೆಜಿ ಮೇಲ್ಪಟ್ಟ ವಿಭಾಗದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಆಕರ್ಷಕ ಬಹುಮಾನ: ಈ ಬಾರಿಯ ‘ಮಿಸ್ಟರ್ ಭಟ್ಕಳ’ ಪಟ್ಟ ಗೆಲ್ಲುವ ವೀರನಿಗೆ 25,000 ರೂಪಾಯಿ ನಗದು ಬಹುಮಾನ ಸಿಗಲಿದೆ. ರನ್ನರ್ ಅಪ್‌ಗೆ 15,000 ಹಾಗೂ ‘ಬೆಸ್ಟ್ ಪೋಸರ್’ ಪ್ರಶಸ್ತಿಗೆ 5,000 ರೂಪಾಯಿ ಮೀಸಲಿಡಲಾಗಿದೆ. ಪ್ರತಿ ವಿಭಾಗದ ಮೊದಲ ಐದು ವಿಜೇತರಿಗೂ ನಗದು ಬಹುಮಾನ ನೀಡಲಾಗುತ್ತದೆ. ನಿಯಮಗಳು: ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕ್ರೀಡಾಪಟುಗಳಿಗೆ ಮಾತ್ರ ಇಲ್ಲಿ ಅವಕಾಶವಿದ್ದು, ಸಂಜೆ 2 ರಿಂದ 4 ಗಂಟೆಯ ಒಳಗೆ ತೂಕ ಪ್ರಕ್ರಿಯೆ (Weighing) ನಡೆಯಲಿದೆ.

ಇಂಡಿಯನ್ ಬಾಡಿ ಬಿಲ್ಡರ್ಸ್ ಫೆಡರೇಶನ್ (IBBF) ನಿಯಮಾವಳಿಯಂತೆ ನಡೆಯಲಿರುವ ಈ ರೋಚಕ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಭಟ್ಕಳ ಸಜ್ಜಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ ವಿವೇಕ್ ನಾಯ್ಕ್ ವರದಿ ಮಹಾಂತೇಶ್ ಎಸ್ ಹುಲಿಕಟ್ಟಿ




