Ad imageAd image

ಗುರಿಯೇ ಇಲ್ಲದ ಬಜೆಟ್: ಗೋವಿಂದಗಡ್ರ

Bharath Vaibhav
ಗುರಿಯೇ ಇಲ್ಲದ ಬಜೆಟ್: ಗೋವಿಂದಗಡ್ರ
WhatsApp Group Join Now
Telegram Group Join Now

ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ಗಳನ್ನು ಮಂಡಿಸಿ ದಾಖಲೆ ಮಾಡಿರಬಹುದು ಆದರೆ ಬಜೆಟ್ಟಿನಲ್ಲಿ ಯಾವುದೇ ದಾಖಲೆ ಮಾಡುವಂತಹ ಅಂಶಗಳಿಲ್ಲ. ಈ ಬಜೆಟ್ಟಿನಲ್ಲಿ ವೋಟ್ ಬ್ಯಾಂಕಿಗಾಗಿ ಕೆಲವು ವರ್ಗಗಳ ಓಲೈಕೆ ಎದ್ದು ಕಾಣುತ್ತದೆ. ಬಜೆಟ್ ಎಂದರೆ ಅಭಿವೃದ್ಧಿ ಪರವಾಗಿರಬೇಕು ಈ ಬಜೆಟ್ಟಿಗೆ ಯಾವುದೇ ಗುರಿ ಇಲ್ಲದಿರುವುದು ವಿಶಾಲನಿಯ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಬಜೆಟ್ಟಿಗೆ ಯಾವುದೇ ಗುರಿ ಇಲ್ಲ ಎಂದು ಟೀಕಿಸಿದ್ದಾರೆ.
ಗ್ಯಾರಂಟಿ ಎಂದು ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ ಎಂದು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಜಾಹಿರಾತುಗಳನ್ನು ಹಾಕಿದ್ದೆ ಸಾಧನೆ ಆಗಿದೆ ಹೊರತು ಇವು ಯಾವು ಗ್ಯಾರೆಂಟಿಗಳ ಗುರಿ ತಲುಪಿಲ್ಲ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಗೋವಿಂದಗೌಡ್ರ ಟೀಕಿಸಿದ್ದಾರೆ. ಐದು ಗ್ಯಾರಂಟಿ ಗಳು ನಮ್ಮ ಶಕ್ತಿ ಎಂದು ಬೊಬ್ಬೆ ಹೊಡೆಯುತ್ತಿದ್ದ ಮುಖ್ಯಮಂತ್ರಿಗಳು ಯುವ ನಿಧಿಗೆ ನಯಪೈಸೆಯನ್ನು ಬಜೆಟ್ ನಲ್ಲಿ ಮೀಸಲಿಡದಿರುವುದು ಈ ಸರ್ಕಾರದ ಯುವ ಪೀಳಿಗೆಯ ಬಗ್ಗೆ ಕಾಳಜಿಯನ್ನು ಎದ್ದು ತರುತ್ತದೆ. ಇದೇ ಮುಂದುವರೆದರೆ ಧಾರವಾಡದಲ್ಲಿ ಯುವಕರು ದಂಗೆ ಇದ್ದಂತೆ ರಾಜ್ಯಾದ್ಯಂತ ಯುವಕರು ದಂಗೆ ಏಳಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ. ಅಭಿವೃದ್ಧಿಗೆ ಹೊಸ ಯೋಜನೆಗಳು ಉದ್ಯೋಗ ಸೃಷ್ಟಿಗೆ ಹೊಸ ಯೋಜನೆಗಳು ಯಾವುದೇ ಈ ಬಜೆಟ್ಟಿನಲ್ಲಿ ಇಲ್ಲದಿರುವುದು ನಿರಾಶದಾಯಕವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಒಟ್ಟಾರೆ ಇದು ಗೊತ್ತು ಗುರಿ ಇಲ್ಲದ ಬಜೆಟ್ ಆಗಿದೆ ಎಂದು ಅವರು ಟೀಕೆಸಿದ್ದಾರೆ

ವರದಿ : ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!