ಚೆನ್ನೆöÊ: ಭಾರತ ಕ್ರಿಕೆಟ್ ತಂಡವು ಧರ್ಮಶಾಲಾ ಹಾಗೂ ಲಕ್ನೋಗಳಲ್ಲಿ ನಡೆದ ಅಪಘಾನಿಸ್ತಾನ್ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಜಯಿಸಿ ಸರಣಿ ಗೆದ್ದಿದ್ದು, ಇಂದು ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿ ಮತ್ತಷ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಎಂ.ಎ. ಚಿದಂಬAರA ಕ್ರೀಡಾಂಗಣದಲ್ಲಿ ಪಂದ್ಯ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗುವುದು. ಭಾರತ ತಂಡವು ಸರಣಿ ಗೆದ್ದಾಗಿದೆ. ಆದರೆ ವಿಶ್ವದ ನಂ.೧ ವೃತ್ತಿ ಪರ ತಂಡದ ಕೆಲಸ ಇನ್ನು ಮುಗಿದಿಲ್ಲ. ಮುಂಬರುವ ೨೦೨೭ ರ ವಿಶ್ವಕಪ್‌ಗೆ ಬಲಾಢ್ಯ ಯುವ ಕಾಂಬಿನೇಷನ್ ತಂಡ ಕಟ್ಟುವಲ್ಲಿ ಟೀಮ್ ಮ್ಯಾನೆಜ್‌ಮೆಂಟ್ ನಿರತವಾಗಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಗೈರು ಹಾಜರಿಯಲ್ಲಿ ತಂಡದ ನಾಯಕ ಶುಭಮಾನ್ ಗಿಲ್ ತಮ್ಮ ಜವಾಬ್ದಾರಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಇಶಾನ್ ಕಿಶನ್ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಭೀತು ಮಾಡಿದ್ದಾರೆ.
ಯುವ ವೇಗಿ ಗರ‍್ನೋರ್ ಬ್ರಾರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಸಾಮರ್ಥ್ಯ ಸಾಭೀತು ಮಾಡಿದ್ದಾರೆ. ಇನ್ನು ಹೊಸಬರಿಗೆ ಅವಕಾಶ ನೀಡಿ ಬಲಾಢ್ಯ ಯುವ ತಂಡ ಕಟ್ಟುವಲ್ಲಿ ಟೀಮ್ ಮ್ಯಾನೆಜ್‌ಮೆಂಟ್ ನಿರತವಾಗಿದೆ.


