LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬಟ್ಟೆ ಕೊಡಿಸಿಲವೆಂದು ನೇಣಿಗೆ ಶರಣಾದ ಅಕ್ಕ - ತಂಗಿಯರು

Advertisement

ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಇಬ್ಬರು ಅಪ್ರಾಪ್ತ ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಶಾಂತಿನಗರದಲ್ಲಿ ನಡೆದಿದೆ.

ಹಣಮಂತಿ (18) ಮತ್ತು ಪೂಜಾ (17) ಎಂದು ಗುರುತಿಸಲಾಗಿದೆ.ಇಬ್ಬರೂ ಶಹಾಬಾದ್ ಪಟ್ಟಣದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಣಮಂತಿ ಪಿಯುಸಿ ದ್ವಿತೀಯ ವರ್ಷ ಹಾಗೂ ಪೂಜಾ ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದರು ಎನ್ನಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಇಬ್ಬರೂ ವೇಲ್ ಬಳಸಿ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಇಬ್ಬರು ಸಹೋದರಿಯರು ತಮ್ಮ ತಂದೆಯೊಂದಿಗೆ ಶಹಾಬಾದ್ ಪಟ್ಟಣದಲ್ಲಿ ವಾಸಿಸುತ್ತಿದ್ದರು. ತಂದೆ ನಿವೃತ್ತ ಯೋಧರಾಗಿದ್ದು, ಸಹೋದರ ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದುಬಂದ ಬಳಿಕ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಸಹೋದರಿಯರ ಸಾವಿಗೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಟಿ ತಂಡಕ್ಕೆ ಪಾಂಡ್ಯಾರನ್ನು ನಾಯಕರನ್ನಾಗಿ ಮಾಡಿ ಕರೆತರಲು ಪ್ರಾಂಚೈಸಿ ನಿರಾಕರಣೆಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ನೇಣಿಗೆ ಶರಣು ಕೆಎಎಸ್ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ : 5 ವರ್ಷಗಳ ವಯೋಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಭಾರತ ಡೆವಿಸ್ ಕಪ್ ಟೆನಿಸ್ ತಂಡಕ್ಕೆ ಮಾನಸ ದಾಮನೆದ್ರುವ್ ಜುರೆಲ್- ಸರಫರಾಜ್ ಖಾನ್ ನಡುವೆ ಪೈಪೋಟಿ ವೆಂಕಟೇಶ್ವರ ಪದವಿ ಮಹಾವಿದ್ಯಾಲಯ ವತಿಯಿಂದ ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಬಿ ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಅಪಘಾನಿಸ್ತಾನ್ ತಂಡಕ್ಕೆ ಸರಣಿ ಜಯವಿಕಾಸಸೌಧದ ಕ್ಯಾಂಟೀನ್ ಮೇಲೆ ದಿಢೀರ್ ದಾಳಿ : ಪ್ಲೇಟ್‌ಗಳ ಮೇಲೆ ಫಂಗಸ್ ಪತ್ತೆ, ಕ್ಯಾಂಟೀನ್ ಬಂದ್ಯತ್ರೀಂದ ಸಿದ್ದರಾಮಯ್ಯ ಅನುಭವ ಇಲ್ಲದ ಮಂಗ : ಎ.ಎಚ್. ವಿಶ್ವನಾಥ್ಕಾಂಗರೂಗಳನ್ನು ಅವರದೇ ನೆಲದಲ್ಲಿ ೧೯೮ ರನ್‌ಗಳಿಗೆ ಆಲೌಟ್ ಮಾಡಿದ ಬಾಂಗ್ಲಾ