Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಶ್ವಾಸ ಮತಯಾಚನೆಯಲ್ಲಿ ವಿಜಯ್ ಯಶಸ್ವಿ : 144 ಶಾಸಕರ ಬೆಂಬಲ 

Advertisement

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ವಿಜಯ್ ಗೆ ಇದೀಗ ಅಗ್ನಿಪರೀಕ್ಷೆ ಎದುರಾಗಿದತ್ತು. ಇಂದು ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ವಿಶ್ವಾಸಮತಯಾಚನೇ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ತಮಿಳುನಾಡು ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಒಟ್ಟು 144 ಶಾಸಕರು ಬೆಂಬಲ ನೀಡಿದ್ದು ವಿಧಾನಸಭೆಯಲ್ಲಿ ವಿಶ್ವಾಸ ಮಥವನ್ನು ಇದೀಗ ಮುಖ್ಯಮಂತ್ರಿ ವಿಜಯ್ ಗೆದ್ದಿದ್ದಾರೆ.

ಈಗಾಗಲೇ ವಿಜಯ್ ಸರ್ಕಾರಕ್ಕೆ ತಮ್ಮ ಪಕ್ಷದ ಐವರು ಶಾಸಕರಿಂದ ಸಂಪೂರ್ಣ ಬೆಂಬಲ ಇದೆ ಎಂದು ಸದನದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಬೆಂಬಲ ಘೋಷಿಸಿತು.

 ಇನ್ನು ಸಿಪಿಐ ಪಕ್ಷದ ಇಬ್ಬರು ಶಾಸಕರು ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದರು. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು ಸದಸ್ಯರ ಬಲ 232 ಇದು ವಿಜಯ್ ಬಹುಮತ ಸಾಬೀತಿಗೆ 117 ಶಾಸಕರ ಬಲ ಬೇಕು.

 ಸಿಪಿಐ 2, ಸಿಪಿಐ(ಎಂ) 2, ಟಿವಿಕೆ ಸರ್ಕಾರದ ಪರ ಮತಯಾಚನೆ ಮಾಡಿದ್ದು, ಡಿಎಂಕೆ ಪಕ್ಷದ ಓರ್ವ ಶಾಸಕರು ಟಿವಿಕೆ ಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಪಿಎಂಕೆ ಪಕ್ಷದ 4 ಶಾಸಕರು ಟಿವಿಕೆಗೆ ಬೆಂಬಲ ನೀಡಿದ್ದು ನಿರೀಕ್ಷೆಗೂ ಮೀರಿ ಬೆಂಬಲ ಸಿಕ್ಕಿದೆ.

ಇದೆ ಸಂದರ್ಭದಲ್ಲಿ ಡಿಎಂಕೆ ಶಾಸಕರಿಂದ ಸಭಾತ್ಯಾಗ ಮಾಡಿದ ಘಟನೆ ಕೂಡ ನಡೆಯಿತು. ವಿಶ್ವಾಸಮತ ಯಾಚನೆ ನಡುವೆ ಡಿಎಂಕೆ ಸಭಾತ್ಯಾಗ ಮಾಡಿತು.

ಟಿವಿಕೆಗೆ ಬೆಂಬಲ ನೀಡಿದವರಿಗೆ ಮುಖ್ಯಮಂತ್ರಿ ವಿಜಯ್ ಧನ್ಯವಾದ ತಿಳಿಸಿದರು. ನಾನು ತಮಿಳುನಾಡಿಗಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್, ವಿಸಿಕೆ, ಮುಸ್ಲಿಂ ಲೀಗ್ ಹಾಗೂ ಎಡ ಪಕ್ಷಗಳಿಗೆ ಮುಖ್ಯಮಂತ್ರಿ ವಿಜಯ್ ಧನ್ಯಾವಾದ ತಿಳಿಸಿದರು. 

ದ್ವೇಷದ ರಾಜಕಾರಣ ಮಾಡುವುದಿಲ್ಲ. ನಮ್ಮ ವಿರೋಧಿಗಳನ್ನು ಅಭಿವೃದ್ಧಿಯ ಭಾಗವಾಗಿಸಿಕೊಳ್ಳುತ್ತೇವೆ. ಇಂದಿನ ಸರ್ಕಾರದ ಯೋಜನೆಗಳು ಮುಂದುವರೆಯಲಿವೆ. ನಮ್ಮ ಸರ್ಕಾರ ಕುದುರೆ ವ್ಯಾಪಾರದಲ್ಲಿ ತೊಡಗುವುದಿಲ್ಲ ಎಂದು ವಿಜಯ್ ತಿಳಿಸಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ರಾನ್ಸ್ನಲ್ಲಿ ವಿಶ್ವದ ಅಗ್ರಗಣ್ಯ ನಾಯಕರ ಜಿ-೭ ಸಭೆರಾಜ್ಯದ ಅರ್ಹರಿಗಷ್ಟೇ ಗ್ಯಾರಂಟಿ ಯೋಜನೆಗಳು : ಎಂ. ಬಿ. ಪಾಟೀಲ ಬೆಂಗಳೂರಿನ ಹಲವು ಆರ್ ಟಿ ಓ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶಬೆಳಗಾವಿಯಲ್ಲಿ ಕಸದ ರಾಶಿಯಲ್ಲಿ ಒಟ್ಟು 59 ಜೀವಂತ ಗುಂಡುಗಳು ಪತ್ತೆಚಿಕ್ಕ ಪಾನ್ ಅಂಗಡಿಗೆ 1.85 ಲಕ್ಷ ರೂ. ವಿದ್ಯುತ್ ಬಿಲ್ : ಭಯದಿಂದ ವ್ಯಾಪಾರಿ ಆತ್ಮಹತ್ಯೆ ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಇಬ್ಬರು ಅಪ್ರಾಪ್ತ ಅಕ್ಕ-ತಂಗಿಯ ಮೇಲೆ ಕಿರಾತಕನಿಂದ ಲೈಂಗಿಕ ದೌರ್ಜನ್ಯಡಾಕ್ಟರ್ ಚೀಟಿ ಇಲ್ಲದೇ ಯಾವುದೇ ಕೆಮ್ಮಿನ ಔಷಧ ಮಾರಾಟ ಮಾಡುವಂತಿಲ್ಲ : ಕೇಂದ್ರ ಸರ್ಕಾರಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಸೋಮವತಿ ಅಮಾವಾಸ್ಯೆ ಅಂಗವಾಗಿ ಖಾನಾಪುರದಲ್ಲಿ ಶ್ರೀ ಮೈಲಾರ ಮಲ್ಲಣ್ಣನ ಪಲ್ಲಕ್ಕಿ ಉತ್ಸವ ವೈಭವ