Ad imageAd image

ಯೆಲ್ಹೇರಿ ಪ್ರೌಡ ಶಾಲೆ ವತಿಯಿಂದ ಇಕೋ ಕ್ಲಬ್ ಕಾರ್ಯಕ್ರಮ

Bharath Vaibhav
ಯೆಲ್ಹೇರಿ ಪ್ರೌಡ ಶಾಲೆ ವತಿಯಿಂದ ಇಕೋ ಕ್ಲಬ್ ಕಾರ್ಯಕ್ರಮ
WhatsApp Group Join Now
Telegram Group Join Now

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಯೆಲ್ಹೇರಿ ಶಾಲೆಯ ವತಿಯಿಂದ ಇಕೋ ಕ್ಲಬ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಪರಿಸರ ಅಧ್ಯಯನ ಮಾಡಲು ಮಕ್ಕಳನ್ನು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಯ ಶಿಕ್ಷಣ ಪ್ರೇಮಿಗಳು ಹಾಗೂ
ಗ್ರಾಮದ ಹಿತೈಷಿಗಳಾದ ಸೋಮನಾಥ ರೆಡ್ಡಿ ಬೋರೆಡ್ಡಿ ಅವರ ಮಾತೋಶ್ರೀ ಫಾರ್ಮ್ ತೋಟಕ್ಕೆ ಭೇಟಿ ನೀಡಲಾಯಿತು.

ಮಾತೋಶ್ರೀ ಫಾರ್ಮ್ ತೋಟದ ಮಾಲೀಕರಾದ ಸೋಮನಾಥ ರೆಡ್ಡಿ ಬೋರೆಡ್ಡಿ ಅವರ ತೋಟದಲ್ಲಿ ಬೆಳೆದ ವಿವಿಧ ಹಣ್ಣಿನ ಮರಗಳು ಮತ್ತು ಸಸ್ಯಗಳ ಪ್ರಾಮುಖ್ಯತೆಯನ್ನು ಕುರಿತು ಮಾಹಿತಿ ನೀಡಿದರು.

ತೋಟದಲ್ಲಿ ಬೆಳೆದ ವಿವಿಧ ಹಣ್ಣುಗಳನ್ನು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸವಿಯಲು ನೀಡಿದರು.
ಪರಿಸರ ಅಧ್ಯಯನ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಮನೆಗೊಂದು ಮರ ಊರಿಗೊಂದು ವನ ಎಂಬ ಮಾತಿನಂತೆ ಪ್ರತಿ ಒಬ್ಬ ವಿದ್ಯಾರ್ಥಿ ಅಮ್ಮನ ಹೆಸರಲ್ಲಿ ಒಂದೊಂದು ಮರ ನೆಟ್ಟು ಪೋಷಿಸುವ ಮೂಲಕ ಪರಿಸರ ಸ್ನೇಹಿಯಾಗಿ ಬದುಕಲು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!